Breaking News
Home / ಕವನ / *””ಆಗುವುದಾದರೆ ನೀ “”*

*””ಆಗುವುದಾದರೆ ನೀ “”*

Spread the love

 

*””ಆಗುವುದಾದರೆ ನೀ “”*

ನೀ ಏನಾದರೂ ಆಗುವುದಾದರೆ
ಕೊನೆ ಇರದ ಕಡಲಿನಂತಾಗು
ಶತ್ರುಗಳು ನಿನ್ನ ಸಾಮರ್ಥ್ಯವ ಅಳೆಯಲಾರದೆ ಸೋಲುವಂತಾಗು

ಮನವೇ ನೀ ಆಗುವುದೇ ಆದರೆ
ಬೀಸುವ ತಂಗಾಳಿಯಾಗು
ಕಷ್ಟದುರಿಯಲಿ ಬೆಂದವರಿಗೆ
ತಂಪೆರೆಯುವ ಮಂದಾನಿಲವಾಗು

ಆಗುವುದೆಂದು ನಿರ್ಧರಿಸಿದರೆ
ಸುಡುವ ಸೂರ್ಯನಂತಾಗು
ನಿನ್ನೇಳ್ಗೆಯ ಸಹಿಸದವರು ಸನಿಹಕ್ಕೂ ಬಾರದಂತಾಗು

ನೀ ಆಗಿಯೇ ಆಗುವುದಾದರೆ
ತಾಳ್ಮೆಯ ರೂಪ ಧರಣಿ ಯಂತಾಗು
ಕಷ್ಟಗಳ ವಿಧಿ ಮಳೆಗರೆದರು
ಅಂಜದ ಪರ್ವತದಂತಾಗು

ನೀ ಆಗಲೇ ಬೇಕೆಂದರೆ
ಮಳೆ ನಿಂತು ಹಗುರಾದ ಮುಗಿಲಾಗು
ಕಿವುಡರ ಸಂತೆಯೊಳಗೊಂದು ಸಿಡಿಲಬ್ಬರದ ಶಬ್ಧವಾಗು

ಮಧುಮಾಲತಿ ರುದ್ರೇಶ್ ಬೇಲೂರು


Spread the love

About Ad9 Haberleri

Check Also

ತೊಟ್ಟಿಲು

Spread the love ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು …

Leave a Reply

Your email address will not be published. Required fields are marked *