ಹಸುರ ಮಧ್ಯದಿ ಸೂರ್ಯ ನುದಯವು
ಹೊಸೆದು ಸುಂದರ ಹೊನ್ನ ಬಣ್ಣವ
ಬೆಸೆದು ಹಿಮಮಣಿ ಕಣ್ಣಿಗಂದವು ಶುಭದ ಘಳಿಗೆಯಲಿ!
ನಸುಕು ಸಮಯವು ಧರಣಿಯೊಲವಿಗೆ
ರಸದನಿಮಿಷವು ನಲ್ಲನುಡುಗೊರೆ
ಹಸುರ ಹಾಸಿನ ಮೇಲೆ ಕಿರಣವ ಸೂಸಿ ಚುಂಬಿಸಿದ!!
ಚಲುವೆನಾಚುತ ಮನವನರಳಿಸಿ
ಹಲವುಫಲಗಳ ಧಾರೆಯೆರೆದಳು
ಸಲುಗೆಯಿಂದಲಿ ಮನದಿ ನಲಿದಳು ದಾಹತಣಿದಿರಲು!
ಕಳೆಯುಹೊಂದಿತು ಬಾನಿನಂಚಿಗೆ
ಹೊಳೆದುಜಗದಲಿ ರಸಿಕಮನಗಳು
ಜಳಕಮಾಡಲು ಸುರಿದಮಂಜಿನ ಹನಿಯ ಸಿಂಚನದಿ!!
ಸೆಳೆದು ಕಂಗಳಬಿರಿದ ಪುಷ್ಪವು
ಬಳಿಗೆ ಕರೆಯಲು ಮುದವು ಮನದಲಿ
ಹೊಳೆವಮುತ್ತಿನ ಮಣಿಯು ಮೇಲಣ ಚೆಂದ ಕಾಣುತಲಿ!
ತಳೆದು ಬೆಳಗಲಿ ಧರೆಯ ಸೊಬಗಿಗೆ
ಮಿಳತಗೊಂಡಿದೆ ಪಸುರ ಗಿಡದಲಿ
ಬಳಿಗೆ ನಸರಿಯು ಸುತ್ತುಹಾಕುತ ಹಾಡಿ ಸಂಗೀತ!!
ಧರಣೀಪ್ರಿಯೆ
ದಾವಣಗೆರೆ
Ad9 News Latest News In Kannada