Breaking News
Home / ಕವನ / ರವಿ ಜಾರುವ ವೇಳೆಗೆ ನಬಕೆ ರಂಗೇರಿದೆ ನೀ ಬರುವ ಗಳಿಗೆಗೆ ಬಯಕೆ ರಂಗೇರಿದೆ

ರವಿ ಜಾರುವ ವೇಳೆಗೆ ನಬಕೆ ರಂಗೇರಿದೆ ನೀ ಬರುವ ಗಳಿಗೆಗೆ ಬಯಕೆ ರಂಗೇರಿದೆ

Spread the love

ಗಜಲ್

ರವಿ ಜಾರುವ ವೇಳೆಗೆ ನಬಕೆ ರಂಗೇರಿದೆ
ನೀ ಬರುವ ಗಳಿಗೆಗೆ ಬಯಕೆ ರಂಗೇರಿದೆ

ಹಾರುವ ಬೆಳ್ಳಕ್ಕಿ ಬಾನ ಸಿಂಗರಿಸಿವೆ
ಕನಸಲಿ ನೀ ಬಂದು ಭಾವಕೆ ರಂಗೇರಿದೆ

ಚಂದಿರನ ಚಲುವೊಂದು ಭುವಿಗಿಳಿದಿದೆ
ಮಹಾಶ್ವೇತೆಯ ಆಗಮನ ಮನಕೆ ರಂಗೇರಿದೆ

ಹಾಲಹೊಳೆಯೊಂದು ಹರಿದು ಬರುತಿದೆ
ಬಾಳ ದೋಣಿಯಲಿ ಪ್ರೇಮಕೆ ರಂಗೇರಿದೆ

ನಟ್ಟಿರುಳು ಬೆಳಗುವ ದೀಪಗಳ ಸಾಲು
‘ಆರಾಧ್ಯೆ’ ಯ ಬೆಳಕಿನಲಿ ಮನಕೆ ರಂಗೇರಿದೆ

ಶ್ರೀಮತಿ ಗಿರಿಜಾ ಮಾಲಿ ಪಾಟೀಲ ವಿಜಯಪುರ


Spread the love

About Ad9 Haberleri

Check Also

ವಿದಾಯ

Spread the love ಕಾಡುವ ಮಾತುಗಳ ಮೆರವಣಿಗೆಯಲಿ ನನ್ನ ಮನ ನಿನಗಾಗಿ ಮತ್ತೆ ಪಲ್ಲವಿಸಿದೆ ನನ್ನಂತರಾಳ ಮಾರ್ದನಿಸುತಿದೆ ನಿನ್ನ ನೆನಪು …