Breaking News
Home / ಮೂಡಲಗಿ / ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ) ಮೂಡಲಗಿ ಘಟಕದಿಂದ ತಹಶೀಲ್ದಾರ್ ಅವರಿಗೆ ಮನವಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ) ಮೂಡಲಗಿ ಘಟಕದಿಂದ ತಹಶೀಲ್ದಾರ್ ಅವರಿಗೆ ಮನವಿ

Spread the love

ಮೂಡಲಗಿ  : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಿದರ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ರವರು ಸುಳ್ಳು ಹೇಳಿಕೆ ನೀಡಿ ನಮ್ಮ ಸಂಘದ ಹೆಸರಿಗೆ ಕಪ್ಪು ಮಸಿ ಬಳೆಯಲು ಪ್ರಯತ್ನಿಸಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಮೂಡಲಗಿ ತಾಲೂಕಾ ಘಟಕದ ಅದ್ಯಕ್ಷ ಭಗವಂತ ಉಪ್ಪಾರ ಆಗ್ರಹಿಸಿದರು.


ಮಂಗಳವಾರದಂದು ಪಟ್ಟಣದ ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನೋಂದಾಯಿತ ಸಂಘದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯನಿರತ ಪತ್ರಕರ್ತಕರ ಸಂರಕ್ಷಣೆ, ಸುರಕ್ಷತೆ, ಅಂತಹ ಕಾರ್ಯಕರ್ತರಿಗೆ ನ್ಯಾಯ ಒದಗಿಸುವುವ ಪ್ರಭಾರ ಹಾಗೂ ಜವಾಬ್ದಾರಿಯು ಸಂಘಟನೆಯ ಮೇಲೆ ಇರುತ್ತದೆ. ಆದರೆ ಈ ಸಂಘಟನೆಗಳು ಕಾರ್ಯನಿರತ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸದೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದರಿಂದ ಕರ್ನಾಟಕ ಕಾರ್ಯನಿರತ ವರದಿಗಾರರ ಧ್ವನಿ ಎಂದು ಹೊಸ ಸಂಘಟನೆಯನ್ನು ರಾಜ್ಯಮಟ್ಟದಲ್ಲಿ ನೋಂದಾಯಿಸಲಾಗಿರುತ್ತದೆ, ಆದರೆ ಶಿವಕುಮಾರ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಾರ್ಯನಿರತ ಪತ್ರಕರ್ತರ ಸಂಘ, ಬೀದರ ರವರು ದಿನಾಂಕ: 16ರಂದು ವರದಿ ಜಾರಿ ಮಾಡಿ ನಕಲಿ ಸಂಘಟನೆ ಎಂದು ಉಲ್ಲೇಖಿಸಿರುವುದು ತೀವ್ರ ಖಂಡನಾರ್ಹ ಸಂಗತಿಯಾಗಿದೆ ಎಂದರು.
ಒಬ್ಬ ಜವಾಬ್ದಾರಿಯುತ ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಪರವಾಗಿ ಹೋರಾಟ ಮಾಡುವ ಬಂಗ್ಲೆ ಮಲ್ಲಿಕಾರ್ಜುನ ಇವರ ವಿರುದ್ಧ ಅವಹೇಳನಕಾರಿ ಹಾಗೂ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಶಿವಕುಮಾರ ಸ್ವಾಮಿ ಇವರ ವಿರುದ್ಧ ನೊಂದಾಯಿತ ಸಂಘಟನೆಯ ಹೆಸರಿಗೆ ಕಪ್ಪು ಮಸಿ ಬಳೆಯುವ, ಸಮಾಜದಲ್ಲಿ ಕೆಟ್ಟ ಹೆಸರು ಮೂಡಿಸುವ, ಮಾನ ನಷ್ಟ ಮಾಡಿರುವ ಕುರಿತು ಸೂಕ್ತ ಪ್ರಕರಣ ದಾಖಲಿಸಲು ತಮ್ಮಲ್ಲಿ ಈ ಮೂಲಕ ಕೋರಲಾಗಿದೆ. ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವಾದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯಾಕೊಬ ಸಣ್ಣಕ್ಕಿ , ಪ್ರಧಾನ ಕಾರ್ಯದರ್ಶಿ ಭೀಮಶಿ ತಳವಾರ , ಸಹ ಕಾರ್ಯದರ್ಶಿ ಲಕ್ಷ್ಮಣ ಮೆಳ್ಳಿಗೇರಿ, ಖಜಾಂಚಿ ಸುನಿಲ್ ಗಸ್ತಿ ಉಪಸ್ಥಿತರಿದ್ದರು.


Spread the love

About Ad9 Haberleri

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ- ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್

Spread the loveಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ *ಮೂಡಲಗಿ*: ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು …

Leave a Reply

Your email address will not be published. Required fields are marked *