Breaking News

ಜ.25ರಂದು ಮೂಡಲಗಿಯಲ್ಲಿ ವೇಮನರ ಜಯಂತೋತ್ಸವ

Spread the love

ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ  ದಾರ್ಶನಿಕ ಕವಿ ಮಹಾಯೋಗಿ ಶ್ರೀ ವೇಮನರ 611ನೇಯ ಮೂಡಲಗಿ ತಾಲೂಕಾ ಮಟ್ಟದ ಜಯಂತೋತ್ಸವವನ್ನು ಜ.25 ರಂದು ಬಸವ ರಂಗ ಮಂಟಪದಲ್ಲಿ ಮೂಡಲಗಿ ರಡ್ಡಿ ಬಂದುಗಳಿಂದ  ಹಮ್ಮಿಕೊಳ್ಳಲಾಗಿದೆ ಎಂದು ಮೂಡಲಗಿ  ವಿಜಯಕುಮಾರ ಸೋನವಾಲ್ಕರ ಮತ್ತು ಪ್ರದೀಪ ಲಂಕೆಪ್ಪನವರ ತಿಳಿಸಿದರು.   
 ಸೋಮವಾರದಂದು ಪಟ್ಟಣದಲ್ಲಿನ ಪತ್ರಿಕಾ ಕಾರ್ಯಲಯದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು ಜ.25 ರಂದು ಮುಂಜಾನೆ 10ಕ್ಕೆ ಮೂಡಲಗಿ ಶಿಕ್ಷಣ ಸಂಸ್ಥೆಯ  ಹತ್ತಿರದಿಂದ ಬೃಹತ ಬೈಕ್ ರ್ಯಾಲಿ ಜರುಗಲಿದು. ಮಧ್ಯಾಹ್ನ 2 ಗಂಟೆಯಿಂದ ಮೂಡಲಗಿ ಶಿಕ್ಷಣ ಸಂಸ್ಥೆಯ  ಆವರದಿಂದ  ಜಯಂತ್ಯೋತ್ಸವದ ಅಂಗವಾಗಿ ವೇಮನರ ಭಾವ ಚಿತ್ರದ ಭ್ಯವ್ಯ ಮೇರವಣಿಗೆಯು ಮಹಿಳೆಯ ಕುಂಭಮೇಳ ಹಾಗೂ ಸಕಲವಾದ್ಯ ಮೇಳದೊಂದಿಗೆ ಬಸವರಂಗ ಮಂಟಪದವರಿಗೆ ಜರುಗುವುದು. 
        ಸಂಜೆ 5.ಗಂಟೆಗೆ ಬಸವ ರಂಗ ಮಂಟಪದಲ್ಲಿ ಜರುಗಲಿರುವ ವೇಮನರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಹಿಳೆಯರಿಂದ ತೋಟ್ಟಿಲೋತ್ಸವ, ಸುಮಂಗಲಿಯರ ಉಡಿತುಂಬುವದು  ಮತ್ತು ಅತಿಥಿ ಮಹೋದಯರಿಂದ  ಹಾಗೂ ಶ್ರೀಗಳಿಂದ ಉಪನ್ಯಾಸ ಜರುಗುವುದು. 
     ಸಮಾರಂಭದ ದಿವ್ಯ ಸಾನಿಧ್ಯವನ್ನು ಪಟ್ಟಣದ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಶ್ರೀಗಳು, ಶ್ರೀ ಶ್ರೀಧರಬೋಧ ಶ್ರೀಗಳು, ಹರಿಹರ ತಾಲೂಕಿನ ಎರೆಹೊಸಳ್ಳಿಯ ಶ್ರೀ ವೇಮನ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಶ್ರೀಗಳು, ಸುಣಧೋಳಿ ಜಡಿಸಿದ್ಧೇಶ್ವರ ಮಠದ  ಶ್ರೀ ಶಿವಾನಂದ ಶ್ರೀಗಳು, ಮುನ್ಯಾಳ-ರಂಗಾಪೂರದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಶ್ರೀಗಳು, ತೊಂಡಿಕಟ್ಟಿ ಗಾಳೇಶ್ವರ ಮಠದ ಶ್ರೀ ವೆಂಕಟೇಶ್ವರ ಶ್ರೀಗಳು ಮತ್ತು ಮುನ್ಯಾಳದ ಲಕ್ಷ್ಮಣ ದೇವರು ವಹಿಸುವರು. 
     ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಹಿರಿಯರು ಹಾಗೂ ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್.ಸೋನವಾಲ್ಕರ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಮಂಗಳಾ ಅಂಗಡಿ, ಈರಣ್ಣಾ ಕಡಾಡಿ ಮತ್ತು ಅತಿಥಿಗಳಾಗಿ ನರಗುಂದದ ಮಾಜಿ ಸಚಿವ ಬಿ.ಆರ್.ಯಾವಗಲ್ಲ, ನವಲಗುಂದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಹಾಗೂ ಅಥಿತಿ ಉಪನ್ಯಾಸಕರಾಗಿ ಆದ್ಯಾತ್ಮಿಕ ಚಿಂತಕರು ಹಾಗೂ ವಾಣಿಜ್ಯ ತೇರಿಗೆ ನಿವೃತ್ತ ಉಪ ಆಯಕ್ತ ಹುಬ್ಬಳ್ಳಿಯ ಜಿ.ಬಿ.ಗೌಡಪ್ಪಗೋಳ, ರಾಮದುರ್ಗದ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಆನಂದ ಪಾಟೀಲ ಅವರು ಭಾಗವಹಿಸುವರು ಎಂದು ತಿಳಿಸಿದರು.
   ಪತ್ರಿಕಾಗೋಷ್ಠಿಯಲ್ಲಿ  ಅನೀಲ ಸತರಡ್ಡಿ ಮತ್ತು ಕುಮಾರ ಗಿರಡ್ಡಿ, ಹನಮಂತ ಸತರಡ್ಡಿ, ವೀರಣ್ಣ ಸೋನವಾಲ್ಕರ, ಚೇತನ ಹೊಸಕೋಟಿ ಮತ್ತಿತರರು ಇದ್ದರು 

Spread the love

About Ad9 News

Check Also

ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

Spread the love ಮೂಡಲಗಿ: ಪಟ್ಟಣದ ತಾ.ಪಂ ಕಾರ್ಯಲಯದಲ್ಲಿ ಅರಭಾವಿ ಮತ ಕ್ಷೇತ್ರದ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿಗೆ ಚಾಲನೆ …

Leave a Reply

Your email address will not be published. Required fields are marked *