ಮೂಡಲಗಿ: ಬೆಳಗಾವಿ ಲೋಕಸಾಭಾ ಉಪ ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಸಹಾಯಕ ಚುನಾವಣಾಧಿಕಾರಿಗಳಾದ ಸಿ ಪ್ರಸಾದ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಡಿ ಜಿ ಮಹಾತ ಅವರ ಆದೇಶನುಸಾರ ಅರಭಾಂವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳ ಹಾಗೂ ಪಟ್ಟಣದ ವಿವಿಧ ವಾರ್ಡುಗಳ ಸಾರ್ವಜನಿಕರಿಗೆ ಸೆಕ್ಟರ್ ಅಧಿಕಾರಿ ಡಿ ಎಸ್ ಹರ್ದಿ, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಸಿ ಎಮ್ ಮುಗುಳಖೋಡ, ಗ್ರಾಮ ಲೆಕ್ಕಾಧಿಕಾರಿ ಎ ಎಸ್ ಬಾಗವಾನ ಅವರು ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡುವ ವಿಧಾನ ಹಾಗೂ ಅದರ ಪಾರದರ್ಶಕತೆ ಕುರಿತು ಪ್ರಾಯೋಗಿಕವಾಗಿ ತೋರಿಸಿದರು.