Breaking News
Home / ಮೂಡಲಗಿ / ಯಶಸ್ವಿಯಾಗಿ ಸೇನಾಧಿಕಾರಿಗಳ ತರಭೇತಿ ಮುಗಿಸಿದ ಗಿರೀಶ ಬಿಳ್ಳೂರ

ಯಶಸ್ವಿಯಾಗಿ ಸೇನಾಧಿಕಾರಿಗಳ ತರಭೇತಿ ಮುಗಿಸಿದ ಗಿರೀಶ ಬಿಳ್ಳೂರ

Spread the love

 


ಮೂಡಲಗಿ: ಸೇನಾಧಿಕಾರಿಗಳ ಸ್ಪರ್ಧಾತ್ಮಕ ಪರೀಕ್ಷೆಯಾದ ಎನ್.ಡಿ.ಎ ಪರೀಕ್ಷೆ ಪಾಸಾದ ಸ್ಥಳೀಯ ಲಕ್ಷ್ಮೀ ನಗರದ ಯುವಕ ಗಿರೀಸ ಸದಾಶಿವ ಬಿಳ್ಳೂರ. ವಾಯು ಸೇನೆಯ ಪ್ಲಾಯಿಂಗ್ ಆಫೀಸರ್ (ಫೈಟರ್ ಪೈಲಟ್) ಉನ್ನತ ಹುದ್ದೆಯನ್ನು ಹೈದರಾಬಾದಿನ ದುಂಡಿಗಲ್ ತರಭೇತಿ ಕೇಂದ್ರದಲ್ಲಿ ಪಡೆದು ಬಿದರನ ವಾಯು ನೆಲೆಯಾದ ಹೌಕ್ಸ್ (ಹಕೀಂ ಪೇಠ) ಪ್ರಥಮ ಸೇವೆಯಾಗಿ ಮಾಡಲಿದ್ದಾರೆ.
ಶನಿವಾರ ಹೈದರಾಬಾದನಲ್ಲಿ ಜರುಗಿದ ವಾಯು ಸೇನೆಯ ಉನ್ನತಾಧಿಕಾರಿಗಳ ತರಭೇತಿ ಕೇಂದ್ರದಲ್ಲಿ ದೇಶದ ಸೇನೆಯಲ್ಲಿಯ ಉನ್ನತ ಹುದ್ದೆಗೆರಿದರು. ಸ್ಪಧಾತ್ಮಕ ಯುಗದಲ್ಲಿ ಕಿರಿಯ ವಯಸ್ಸಿನಲ್ಲಿ ಉನ್ನತ ಸ್ಥಾನ ಪಡೆದು ಇತರರಿಗೂ ಮಾದರಿಯ ಯುವಕರಾಗಿದ್ದಾರೆ. ಮುಂದಿನ ಭವಿಷ್ಯತ್ತಿನಲ್ಲಿ ಸೇನೆಯ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇವರಿಗಿದೆ.


ಹಿನ್ನೆಲೆ: ತಂದೆ ಸದಾಶಿವ ಬಿಳ್ಳೂರ ಹುಣಶ್ಯಾಳ (ಪಿ.ವಾಯ್)ನ ಪಿಕೆಪಿಎಸ್‍ದಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿದ್ದು, ತಾಯಿ ಶೋಭಾತಾಯಿ ಪಾಟೀಲ ಇವರು ಸಮೀಪದ ಹಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಪ್ರಧಾನ ಗುರುಮಾತೆಯಾಗಿದ್ದಾರೆ. 1 ರಿಂದ 5 ನೇ ತರಗತಿಯವರೆಗೆ ನಾಗನೂರಿನ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಪೂರೈಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಪೂರ ಸೈನಿಕ ಶಾಲೆಗೆ ಆಯ್ಕೆಯಾಗಿ ಪಿಯುಸಿವರೆಗೆ ವ್ಯಾಸಂಗಮಾಡಿದ್ದಾರೆ. ಪಿಯುಸಿ ದ್ವಿತೀಯ ವರ್ಷದಲ್ಲಿದ್ದಾಗ ಭಾರತೀಯ ಸೇನೆ ನಡೆಸುವ ನ್ಯಾಷನಲ್ ಡಿಪೆನ್ಸ ಆಕ್ಯಾಡೆಮಿ ನಡುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ತೇರ್ಗಡಿ ಹೊಂದಿದ್ದಾರೆ. ಪೂಣೆಯ ಖಡಕ್ವಾಸಲಾದಲ್ಲಿ 3 ವರ್ಷ ಪ್ರಾಥಮಿಕ ಹಂತದ ಸೇನಾ ತರಭೇತಿ ಪಡೆದು, 1 ವರ್ಷದ ವೈಮಾನಿಕ ತರಭೇತಿ ಮುಗಿಸಿರುತ್ತಾರೆ.
ಕಿರಿಯ ವಯಸ್ಸಿನಲ್ಲಿ ದೇಶ ಸೇವೆಯ ಜವಾಬ್ದಾರಿ ಹೊತ್ತು ಇತರ ಯುವಕರರಿಗೂ ಮಾದರಿಯಾಗಿದ್ದಾರೆ. ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಮ್ ಲೋಕನ್ನವರ, ಚೈತನ್ಯ ವಸತಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿದ್ದಾರೆ.

 


Spread the love

About Ad9 Haberleri

Check Also

ಮರಿಯೆಪ್ಪ ಮರಿಯೆಪ್ಪಗೊಳ ಅವರಿಂದ ವಿಠ್ಠಲ ಹೊಸಮನಿ ಅವರಿಗೆ ಸನ್ಮಾನ

Spread the love ಮೂಡಲಗಿ : ಪಟ್ಟಣದ ಸಾಯಿ ಬ್ಯಾಂಕ್ ನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನೂತನವಾಗಿ …