ಕೋಲಾರ ಜಿಲ್ಲೆಯ ಬಂಗಾರಪೇಟೆ, ಮಾಲೂರು, ಮುಳಬಾಗಿಲು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪಡಿತರ ಅಕ್ಕಿಯಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ವಿತರಣೆ ಮಾಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಮಿಶ್ರಣ ಮಾಡಿ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೋಲಾರ: ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿ ಪಡಿತರ(Ration) ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿತರಣೆ ಮಾಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು(Plastic Rice) ಮಿಶ್ರಣ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ವಿಚಾರವಾಗಿ ಜಿಲ್ಲೆಯಲ್ಲಿ …
Read More »ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ : ಶೋಭಾ ಗಸ್ತಿ
ಮೂಡಲಗಿ: ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ ಎಂದು ರಾಷ್ಟೀಯ ನಾರಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಹೇಳಿದರು. ಅವರು ಪಟ್ಟಣದಲ್ಲಿ ಬಿಇಒ ಕಾರ್ಯಾಲಯ, ಸರಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಲಯನ್ಸ್ ಪರಿವಾರದಿಂದ ನಾರಿಶಕ್ತಿ ಪ್ರಶಸ್ತಿ ವಿಜೇತೆಯರಿಗೆ ಸನ್ಮಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ಸೆçöÊರ್ಡ್ ಅವಾರ್ಡ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿರುವ …
Read More »ಜೇಮ್ಸ್ ಸಿನಿಮಾ ವಿಶ್ವಾದ್ಯಂತ ಸುಮಾರು 4 ಸಾವಿರ ಥಿಯೇಟರ್ ಗಳಲ್ಲಿ
ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಸಿನಿಮಾ ಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣಪತ್ರ ದೊರಕಿದ್ದು ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ವಿಶ್ವಾದ್ಯಂತ ಸುಮಾರು 4 ಸಾವಿರ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಜೇಮ್ಸ್ ರಾಜ್ಯದ 400 ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ, ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳು ತೀವ್ರ ಕಾತುರದಿಂದ ಕಾಯುತ್ತಿದ್ದಾರೆ. ಕರ್ನಾಟಕದಾದ್ಯಂತ ಥಿಯೇಟರ್‌ಗಳು ಒಂದು ವಾರದವರೆಗೆ …
Read More »ರಾಯಣ್ಣ ಕುರಿ ಮತ್ತು ಆಡು ರೈತ ಉತ್ಪಾದಕರ ಸಂಸ್ಥೆಯ ಉದ್ಘಾಟನಾ ಸಮಾರಂಭ
ಮೂಡಲಗಿ: ಕೃಷಿಯ ಜೊತೆಯಾಗಿ ರೈತರು ಅವಲಂಬಿತವಾಗಿರುವ ಕುರಿ, ಆಡು, ಕೋಳಿ, ದನಕರುಗಳ ಸಾಕಾಣಿಕೆದಾರರಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿದಾಗ ಮಾತ್ರ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವದು ಎಂದು ಜೋಕಾನಟ್ಟಿಯ ಶ್ರೀ ಯೋಗಿಸಿದ್ದೇಶ್ವರ ಆಶ್ರಮದ ಬಿಳಿಯಾನಸಿದ್ಧ ಮಹಾಸ್ವಾಮೀಜಿ ನುಡಿದರು. ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಜರುಗಿದ ರಾಯಣ್ಣ ಕುರಿ ಮತ್ತು ಆಡು ರೈತ ಉತ್ಪಾದಕರ ಸಂಸ್ಥೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕುರಿಗಾರರಿಗೆ ಸಿಗುವ ಸೌವಲತ್ತುಗಳನ್ನು ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕು. …
Read More »ನಿಯಮ ಉಲ್ಲಂಘಿಸಿ ವಾಹನಗಳ ಮೇಲೆ ಕಟ್ಟು ನಿಟ್ಟಿನ ಕ್ರಮ
“ಬೆಳಗಾವಿ: ನಿಯಮ ಉಲ್ಲಂಘಿಸಿ ವಾಹನಗಳ ಮೇಲೆ ಸಂಘ ಸಂಸ್ಥೆ , ಚಿಹ್ನೆ ಹಾಗೂ ಲಾಂಛನವನ್ನು ಅಳವಡಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಅವರು ಎಚ್ಚರಿಕೆ ನೀಡಿದ್ದಾರೆ. ಸಾರಿಗೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಹನಗಳ ನೋಂದಣಿ ನಾಮಫಲಕಗಳ ಹೊರತು ಯಾವುದನ್ನು ಅಳಡಿಸಬಾರದು, ಈಗಾಗಲೇ ಅಳವಡಿಸಿದರೆ ತೆರವುಗೊಳಿಸಬೇಕು ಉಚ್ಛ ನ್ಯಾಯಾಲಯದ ಆದೇಶವನ್ನು ಸಾರಿಗೆ ಇಲಾಖೆಯಿಂದ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಇಲ್ಲವಾದರೆ ವಾಹನವನ್ನು ಸಾರಿಗೆ …
Read More »ಶ್ರೀಲಂಕಾ ದೇಶದಲ್ಲಿ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರಿಗೆ ಗ್ಲೋಬಲ್ ಐಕಾನಿಕ್ ಅವಾರ್ಡ್ ಪ್ರದಾನ
ಗದಗ:ಶ್ರೀಲಂಕಾ ದೇಶದ ಕೊಲಂಬೊ ನಗರದ ಮೂವಿನೆಕ್ ಕಾನ್ಪರೆನ್ಸ ಹಾಲ್ ನಲ್ಲಿ ಇಂಟರ್ ನ್ಯಾಶನಲ್ ಕಲ್ಚರಲ್ ಪೆಸ್ಟ್ ಕೌನ್ಸಿಲ್ ಮತ್ತು ಗ್ಲೋಬಲ್ ಪೀಸ್ ಪೌಂಡಿಶನ್ ಸಮಿತಿ ವತಿಯಿಂದ ನಡೆದ 27ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಜನಪದ ಕೂಗು ಶಿಕ್ಷಣ ನೀಡುವದರೋಂದಿಗೆ ನಾಡು ನುಡಿಯ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾ ತಮ್ಮ ಕೃಷಿಯ ಬದುಕಿನೊಂದಿಗೆ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಜನಪದ ಕಲಾವಿದ …
Read More »