Breaking News

ರವಿವಾರ ಪಟ್ಟಣದ ಎಸ್.ಎಸ್.ಆರ್ ಪ್ರೌಢ ಶಾಲೆಯಲ್ಲಿ ಜರುಗಿದ ಮದ್ಯಾಹ್ನ ಬಿಸಿಯೂಟ ತಯಾರಿಕಾ ಸಿಬ್ಬಂದಿಗೆ ತರಭೇತಿ ಕಾರ್ಯಾಗಾರ

Spread the love


ಮೂಡಲಗಿ: ಶೈಕ್ಷಣಿಕವಾಗಿ ಮಕ್ಕಳು ಲವಲವಿಕೆಯೊಂದಿಗೆ ಶಾಲಾ ವಾತಾವರಣದಲ್ಲಿರಲು ಪೌಷ್ಠಿಕ ಆಹಾರ ಅತ್ಯಾವಶ್ಯಕವಾಗಿದೆ. ಮಕ್ಕಳ ಕಲಿಕೆಯು ಫಲಪ್ರದವಾಗ ಬೇಕಾದರೆ ಸದೃಢವಾದ ದೇಹ ಅವಶ್ಯಕವಾಗಿ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೆರಿ ಹೇಳಿದರು.

ಅವರು ರವಿವಾರ ಪಟ್ಟಣದ ಎಸ್.ಎಸ್.ಆರ್ ಪ್ರೌಢ ಶಾಲೆಯಲ್ಲಿ ಜರುಗಿದ ಮದ್ಯಾಹ್ನ ಬಿಸಿಯೂಟ ತಯಾರಿಕಾ ಸಿಬ್ಬಂದಿಗೆ ತರಭೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ಬಿಸಿಯೂಟವು ಒಂದು ಅವಿಭಾಜ್ಯ ಅಂಗವಾಗಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ಆಹಾರ ದಾಸ್ತಾನು, ಅಡುಗೆ ಕೊಠಡಿ,ಪಾತ್ರೆ ಪರಿಕರ, ಸ್ವಯಂ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಿಲಿಂಡರ್ ಬಳಕೆ ಮಾಡುವಾಗ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ತಮಗೆ ಕಡಿಮೆ ವೇತನ ವಿದ್ದರು ಸಹ ಸೇವಾ ಮನೊಬಾವನೆಯಿಂದ ಮಾಡುವ ಕಾರ್ಯ ಮೆಚ್ಚುವಂತಹದಾಗಿದೆ ಎಂದು ಬಿಸಿಯೂಟದ ಸಿಬ್ಬಂದಿಯ ಕಾರ್ಯವೈಕರಿ ಮೆಚ್ಚಿ ಪ್ರಶಂಸಿಸಿದರು.
ಗೋಕಾಕ ಉಪಹಾರ ಯೋಜನೆ ನಿರ್ಧೇಶಕ ಎ.ಬಿ ಮಲಬನ್ನವರ, ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್ ತರಕಾರ ಮಾತನಾಡಿ, ಬಿಸಿಯೂಟದ ಸಿಬ್ಬಂದಿಯ ಮೇಲೆ ಜವಾಬ್ದಾರಿ ಹೆಚ್ಚಿಗೆ ಇದ್ದು, ಅಲಕ್ಷ್ಯತನ ತೋರದೆ ಕಾಳಜಿ ಪೂರ್ವಕವಾಗಿ ಕೆಲಸ ನಿರ್ವಹಿಸಬೇಕು.

ಆಹಾರದ ಗುಣಮಟ್ಟ ಹಾಗೂ ಮಕ್ಕಳಿಗೆ ಉಪಯುಕ್ತವಾಗ ಬೇಕು. ಬೆಳಗಿನ ಹಾಲು, ಊಟ ಹಾಗೂ ವಲಯ ವ್ಯಾಪ್ತಿಯಲ್ಲಿ ಜರುಗುವ ವಿಶೇಷ ಭೋಜನಗಳು ಮಾದರಿಯಾಗಿದ್ದು ಇದರಲ್ಲಿ ನಿಮ್ಮ ಪಾತ್ರ ಬಹು ಮುಖ್ಯವಾಗಿದೆ ಎಂದು ನುಡಿದರು.
ಗೋಕಾಕ ಆರೋಗ್ಯ ಇಲಾಖೆಯ ಆರ್.ಬಿ.ಎಸ್.ಕೆ ವೈಧ್ಯಾಧಿಕಾರಿ ರಾಘವೇಂದ್ರ ಮಲ್ಲಿಗೆಪ್ಪಗೋಳ ವೈಯಕ್ತಿಯ ಸ್ವಚ್ಚತೆ, ಆರೋಗ್ಯದ ದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿದರು. ಗ್ಯಾಸ್ ಸಿಲಿಂಡರ್ ಬಳಕೆ ಮುನ್ನೆಚ್ಚರಿಕೆ ಕ್ರಮಗಳು ತೊಂದರೆಯಾದಾಗ ತೆಗೆದುಕೊಳ್ಳಬಹುದಾದ ಕುರಿತು ಮಲ್ಲಿಕಾರ್ಜುನ ಗ್ಯಾಸ್ ಎಜೆನ್ಸಿಯವರು ವಿವರಿಸಿದರು.
ಕಾರ್ಯಾಗಾರದಲ್ಲಿ ಮುಖ್ಯೋಪಾಧ್ಯಯ ಎಸ್ ಆರ್ ಶೇಗುಣಸಿ, ಸಿ.ಆರ್.ಪಿಗಳಾದ ಎಮ್.ಪಿ ಹಿರೇಮಠ, ಟಿ.ಎಸ್ ಜೋಲಾಪೂರ, ಕೆ.ಎಲ್ ಮೀಶಿ, ಎಸ್.ಬಿ ಪಾಟೀಲ, ಬಿ.ಪಿ ಪಾಟೀಲ ಹಾಗೂ ಮೂಡಲಗಿ, ಮುಸಗುಪ್ಪಿ, ಸುಣಧೋಳಿ, ಶಿವಾಪೂರ(ಹ), ಹಳ್ಳೂರ ಸಮೂಹ ವ್ಯಾಪ್ತಿಯ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …