ಹೋಳಿ ಹಬ್ಬ
ಕವನದ ಶೀರ್ಷಿಕೆ:ರಂಗಿನೋಕುಕಳಿ
ಹೋಳಿಹುಣ್ಣಿಮೆಯ ಹಬ್ಬದಂದು
ಮಕ್ಕಳೆಲ್ಲ ಸೇರಿ ಪಟ್ಟಿ ಎತ್ತಿ ಹಣ ತಂದು
ರಂಗಿನೋಕುಳಿಯಾಡುತ ಖುಷಿಯಲಿ
ಬೀದಿ ಬೀದಿ ಸುತ್ತಿ ಗೆಳೆಯರನುಡುಕುತಲಿ!
ಹಸುರು,ಹಳದಿ,ನೀಲಿ,ಕೆಂಪು ನಾನಾ ಬಣ್ಣ
ನೀರಿನಲಿ ಕಲಸಿ ಆಟವಾಡುವರಣ್ಣ
ಮನದಿ ಮಧುರ ಭಾವದ ಸೆಳೆತ ಚೆನ್ನ
ಒಲವಿನಿಂದ ಬೆಸೆಯುವವು ಮೈಮನ!
ಹೋಳಿ ಕಾಮನ ಪ್ರೇಮ ಸಂಕೇತದ ಹಬ್ಬ
ಪ್ರೇಮಿಗಳಿಬ್ಬರನು ನೆನೆವ ದಿನದ ಹಬ್ಬ
ಗೊಂಬೆ ಮಾಡಿ ಅಂದು ಕೂಡಿಸುವರು
ರಾತ್ರಿ ಗೋಳಾಡಿ ಸುಟ್ಟು ಹಾಕುವರು!
ರಂಗು ರಂಗಿನ ಹೋಳಿ ಹಬ್ಬದಲಿ
ನಮ್ಮ ಬದುಕು ಮಿಂದೇಳಲಿ ಜಗದಲಿ
ಕನಸುಗಳು ಮುಂದೆ ನನಸಾಗಲಿ
ಎಂದುಹೋಳಿಗೆ ಮಾಡುಣ್ಣುವರು!!
ಧರಣೀಪ್ರಿಯೆ
ದಾವಣಗೆರೆ