Breaking News
Home / ಕವನ / ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲ

ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲ

Spread the love

ಭಾರತದ ಕುವರಿ ಈ ಪೋರಿ
ತನ್ನಯ ಜಾಣ್ಮೆಯಲ್ಲೇ ಎದ್ದ ಕುಮಾರಿ
ಎಲ್ಲದರಲ್ಲೂ ಮೊದಲಿಗಳೂರಿ
ಅವಳೇ ನಮ್ಮ ಕಲ್ಪನಾ ಚಾವ್ಲ ರೀ

ವೈಮಾನಿಕ ವಿಷಯದಲ್ಲಿ ಆಸಕ್ತಿಯು
ಇವಳ ಬುದ್ದಿವಂತಿಕೆಯ ಕಂಡಿಹರು
ನಾಸಾ ದಲ್ಲೇ ಕೆಲಸ ಖಾಯಂ ಮಾಡಿದರು
ಅವಳ ಉಜ್ವಲ ಭವಿಷ್ಯ ಬೆಳಕಾಯ್ತು

ತಂದೆ ತಾಯಿಯರ ಕಣ್ಮಣಿ ಯಾಗಿದ್ದಳು
ಗಗನದಲ್ಲೇ ಯಾನ ಮಾಡು ತ್ತಿದ್ದಳು
ಸಾಧನೆ ಶಿಖರವನ್ನು ಏರಿದ್ದಳು
ನಾಸಾ ದಲ್ಲೇ ಕೆಲಸ ಗಿಟ್ಟಿಸಿಕೊಂಡ ಭಾರತೀಯ ಮಗಳು

ತನ್ನ ಕನಸ ತಾನೇ ಕಂಡು ಗುರಿ ತಲುಪಿದ್ದಳು
ಗಗನಯಾತ್ರೆ ಯಲ್ಲಿಯೇ ಕೊನೆ ಯುಸಿರೆಳೆದಳು
ಭಾರತಕ್ಕೆ ಹೆಮ್ಮೆಯ ಕೀರ್ತಿ ಪತಾಕೆ ಹಾರಿಸಿದ್ದಳು
ಹೆಣ್ಣಿನ ಕುಲಕ್ಕೆ ಮಾದರಿಯಾಗಿ ಮೆರೆದಿದ್ದಳು ನಮ್ಮ ಕಲ್ಪನಾ ಚಾವ್ಲ

✍️ *ಮಳೆಬಿಲ್ಲು* ಸಾಹಿತಿ ಲೀಲಾ ಗುರುರಾಜ್, ತುಮಕೂರು 🙏🥰🌹❤️


Spread the love

About Ad9 Haberleri

Check Also

ವಿದಾಯ

Spread the love ಕಾಡುವ ಮಾತುಗಳ ಮೆರವಣಿಗೆಯಲಿ ನನ್ನ ಮನ ನಿನಗಾಗಿ ಮತ್ತೆ ಪಲ್ಲವಿಸಿದೆ ನನ್ನಂತರಾಳ ಮಾರ್ದನಿಸುತಿದೆ ನಿನ್ನ ನೆನಪು …

Leave a Reply

Your email address will not be published. Required fields are marked *