Breaking News
Home / ಮೂಡಲಗಿ (page 21)

ಮೂಡಲಗಿ

ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ: ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್‌ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಯುದ್ಧ ರಾಷ್ಟ್ರದಲ್ಲಿ ವಿದ್ಯಾರ್ಥಿಗಳು …

Read More »

ಸಾಧನೆ ಎನ್ನುವದು ಸಾಧಕನ ಸ್ವತ್ತು ವಿನಹಃ ಅಲಸ್ಯಿಯ ಆಸ್ಥಿಯಲ್ಲ: ಸಾಹಿತಿ ಶಿಕ್ಷಕ ಡಾ. ಮಹದೇವ ಜಿಡ್ಡಿಮನಿ

ಮೂಡಲಗಿ: ಸಾಧನೆ ಎನ್ನುವದು ಸಾಧಕನ ಸ್ವತ್ತು ವಿನಹಃ ಅಲಸ್ಯಿಯ ಆಸ್ಥಿಯಲ್ಲ. ಸತತ ಪ್ರಯತ್ನ ನಿರಂತರ ಪ್ರಯತ್ನದಿಂದಾಗಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವೆಂದು ಹಿರಿಯ ಸಾಹಿತಿ ಶಿಕ್ಷಕ ಡಾ. ಮಹದೇವ ಜಿಡ್ಡಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸ್ಥಳೀಯ ಭೀರಸಿದ್ದೇಶ್ವರ ದೇವಸ್ಥಾನದಲ್ಲಿ ಜರುಗಿದ ಗುರುಬಳಗದ ಸತ್ಕಾರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾರ್ವಜನಿಕ ಜೀವನದಲ್ಲಿ ಸದಾ ಸಾಮಾಜಿಕ ಕಾಳಜಿ ಅತ್ಯಾವಶ್ಯಕವಾಗಿದೆ. ಯಾವುದೇ ವೃತ್ತಿಯಾಗಿರಲಿ ಅದರಲ್ಲಿ ಶೃದ್ಧೆ ಹಾಗೂ ಪ್ರಾಮಾಣಿಕವಾಗಿ ದುಡಿಮೆ ಮಾಡಿದರೆ ಯಶಸ್ಸು …

Read More »

ಮೂಡಲಗಿ ಕಸಾಪ ಕಾರ್ಯಕಾರಿಣ ಪದಾಧಿಕಾರಿಗಳ ಪದಗ್ರಹಣ

ಗಣ್ಯರ ಮೆರವಣ ಗೆ; ‘ಶುದ್ಧಿ’ ಪುಸ್ತಕ ಬಿಡುಗಡೆ ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ದ ನೂತನ ಘಟಕದ ಕಾರ್ಯಕಾರಿ ಸಮಿತಿಯ ಪದಗ್ರಹಣ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಫೆ. 18ರಂದು ಮಧ್ಯಾಹ್ನ 3ಗಂಟೆಗೆ ಸ್ಥಳೀಯ ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿವಹಿಸುವರು. ಸಮಾರಂಭದ ಗೌರವಾಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾಗವಹಿಸುವರು. ಉದ್ಘಾಟಕರಾಗಿ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ …

Read More »

ಶ್ರೀ ಶಿವಬೋಧರಂಗ ಪಿ. ಕೆ. ಪಿ. ಎಸ್ ದಿಂದ ದ್ವಿಚಕ್ರ ವಾಹನ ವಿತರಣೆ

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಪ್ರಾಥಮಿಕ ಸಹಕಾರಿ ಸಂಘದಿಂದ ನಾಲ್ಕು ದ್ವಿಚಕ್ರ ವಾಹನವನ್ನು ಗುರುವಾರ ವಿತರಿಸಲಾಯಿತು. ಈ ಸಮಯದಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಸದಾಶಿವ ತಳವಾರ, ನಿರ್ದೇಶಕರಾದ ಬಸವರಾಜ ಕುರಬಗಟ್ಟಿ, ವಿನೋಧ ಪಾಟೀಲ, ವಿರಣ್ಣ ಸೋನವಾಲಕರ, ಸತೀಶ ಲಂಕೆಪ್ಪನವರ, ಮಾರುತಿ ಶಾಬನ್ನವರ, ಸಂಘದ ಕಾರ್ಯ ನಿರ್ವಹಕ ಅಧಿಕಾರಿ ಅಶೋಕ ಮಹಾರಡ್ಡಿ, ವಿಶಾಲ ಜಾಧವ, ಶ್ರೀಶೈಲ ನಂದಗಾವಮಠ ಇದ್ದರು. ಪಾಂಡು ಮಹಾರಡ್ಡಿ, ಅಶೋಕ ಮಹಾರಡ್ಡಿ, ಮಂಜು ಕೋರ್ತಿ , …

Read More »

ಮೂಡಲಗಿಯಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಸ್ಥಳ ಪರಿಶೀಲನೆ

  ಮೂಡಲಗಿ- ಮೂಡಲಗಿಗೆ ಹೊಸ ಉಪ ನೋಂದಣಿ ಕಛೇರಿ ಮಂಜೂರಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬುಧವಾರದಂದು ಕಛೇರಿಗೆ ಅಗತ್ಯವಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು. ಪಟ್ಟಣದ ತಹಶಿಲ್ದಾರರ ಕಚೇರಿಗೆ ಹೊಂದಿಕೊಂಡಿರುವ ಮೂರು ಕೊಠಡಿಗಳನ್ನು ಪರಿಶೀಲಿಸಿದ ಜಿಲ್ಲಾ ನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ ಅವರು, ಈ ಮೂರು ಕೊಠಡಿಯಲ್ಲಿ ಹೊಸ ಉಪ ನೋಂದಣಿ ಕಚೇರಿಯನ್ನುಆರಂಭಿಸಲಾಗುವುದು. ಶೀಘ್ರವಾಗಿ ಮೂಡಲಗಿಯಲ್ಲಿ ಕಚೇರಿ ಆರಂಭ ಮಾಡಲಾಗುವುದು ಎಂದು ಹೇಳಿದರು. ಅರಭಾವಿ ಶಾಸಕ ಹಾಗೂ ಕಹಾಮ …

Read More »

ಅರಭಾವಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ “ಟೊಮ್ಯಾಟೊ ಬೆಳೆಯ ಕ್ಷೇತ್ರೋತ್ಸವ”

ಮೂಡಲಗಿ: ಟೊಮ್ಯಾಟೊ ಬೆಳೆಯಲು ರೈತರು ವಿಜ್ಞಾನಿಗಳ ಸಲಹೆ ಮತ್ತು ನೂತನ ತಂತ್ರಜ್ಞಾನಗಳಿAದ ಹೆಚ್ಚಿನ ಇಳುವರಿ ಕೊಡುವ ತಳಿಗಳನ್ನು ಆಯ್ಕೆ ಮಾಡಿಕೊಂಡು, ಪ್ಲಾಸ್ಟಿಕ್ ಹೊದಿಕೆ, ಹನಿ ನೀರಾವರಿ, ರಸಾವರಿ, ಸೂಕ್ಷö್ಮ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಪೀಡೆ ಮತ್ತು ರೋಗ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಮ್.ಇಂದಿರೇಶ್ ಹೇಳಿದರು. ಅವರು ಗುರುವಾರದಂದು ತಾಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ …

Read More »

ಜ್ಞಾನದ ಹಸಿವು ಇದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ

ಮೂಡಲಗಿ: ಜ್ಞಾನದ ಹಸಿವು ಇದ್ದವರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ, ಗ್ರಾಮೀಣ ಪ್ರದೇಶದ, ಅದರಲ್ಲೂ ರೈತನ ಮಕ್ಕಳು ಪಿ.ಎಸ್.ಆಯ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಒಳ್ಳೆಯ ಸಾಧನೆ ಮಾಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ರವಿವಾರ ರಂದು ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಸಕ್ರೆಪ್ಪಗೋಳ ತೋಟದಲ್ಲಿ ಇಟನಾಳ ಗ್ರಾಮದ ಶಿವಾನಂದ ಬೆನ್ನಳ್ಳಿ ಮತ್ತು ಕಿರಿಯ ಸಹೋದರ ಪ್ರಶಾಂತ ಬೆನ್ನಳ್ಳಿ ಸಹೋದರರಿಬ್ಬರು ಸನ್ಮಾನಿಸಿ ಮಾತನಾಡಿದ …

Read More »

ಮೂಡಲಗಿ ಶ್ರೀ ಶಿವಬೋಧರಂಗ ಮಠದಲ್ಲಿ ದತ್ತಾತ್ರೇಯಬೋಧ ಮತ್ತು ಶ್ರೀಧರಬೋಧರ ಪೀಠಾರೋಹಣ

ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನೃಸಿಂಹವಾಡಿಯ ವೇದಮೂರ್ತಿ ಶ್ರೀಅವಧೂತ ಬೋರಗಾಂವಕರ ಅವರ ನೇತೃತ್ವದಲ್ಲಿ ಪೀಠಾರೋಹಣ ಧೀಕ್ಷಾ ಕಾರ್ಯಕ್ರಮವು ವಿಧಿವತ್ತಾಗಿ ನೆರವೇರಿತು. ಬೆಳಿಗ್ಗೆ ಕೆಳಗಿನಮಠದಲ್ಲಿ ಸನ್ನಿಧಿಗೆ ವಿಶೇಷ ಪೂಜೆಗಳು ನೆರವೇರಿದ ನಂತರ ಮೇಲಿನಮಠದಲ್ಲಿ ಸೌರಯಾಗ ಹೋಮದೊಂದಿಗೆÉ ಶ್ರೀಮಠದ ಸಂಪ್ರದಾಯದಂತೆ ಮತ್ತು ವಿವಿಧ ವಿಧಿವಿಧಾನಗಳೊಂದಿಗೆ ಉಭಯ ಶ್ರೀಗಳಿಗೆ ಧೀಕ್ಷೆಯನ್ನು ಪ್ರಧಾನ ಮಾಡಿದರು. ಧೀಕ್ಷೆ ಸ್ವೀಕರಿಸಿದ ಶ್ರೀಗಳು ಮೇಲಿನ ಮಠದಿಂದ …

Read More »

ಎಮ್ಈಎಸ್ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮೂಡಲಗಿ : ಭಾಷಾ ಗೊಂದಲದಲ್ಲಿ ಬಸವಣ್ಣ, ರಾಯಣ್ಣನಂಥವರಿಗೆ ಅವಮಾನ ಮಾಡಿರುವ ಎಮ್ ಇಉಎಸ್ ಪುಂಡರ ಹುಟ್ಟಡಗಿಸಬೇಕು. ಕರ್ನಾಟಕದಲ್ಲಿ ಶಿವಸೇನೆ ಮತ್ತು ಎಮ್ಈಎಸ್ ಸಂಘಟನೆಗಳ ಮೇಲೆ ನಿಷೇಧ ಹೇರಲೇಬೇಕು ಎಂದು ನಿವೃತ್ತ ಶಿಕ್ಷಕ ಬಿ ಆರ್ ತರಕಾರ ಹೇಳಿದರು. ವಿಶ್ವಗುರು ಬಸವಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಪುಂಡರ ಗುಂಪನ್ನು ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ಲಿಂಗಾಯತ ಪಂಚಮಸಾಲಿ …

Read More »

ಜಂಬೂ ಸವಾರಿಗೆ ಮೆರಗು ನೀಡಿದ ತಾಲೂಕಿನ ವಿವಿಧ ಕಲಾತಂಡಗಳು

  ಮೂಡಲಗಿ: ಪಟ್ಟಣದ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 28ನೇ ವರ್ಷದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ಉತ್ಸವ ಹಾಗೂ ಭವ್ಯ ಮೆರವಣಿಗೆಗೆ ಸೋಮವಾರ ಸಂಜೆ ಜರುಗಿತು. ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಹೊತ್ತಿರುವ ಆನೆಯ ಅಂಬಾರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಷಂಬಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಪಟ್ಟಣದ ಅಯ್ಯಪ್ಪ …

Read More »