Breaking News

ಇಂದಿನಿಂದ ‘ಅನ್ನಭಾಗ್ಯ’ ಅಕ್ಕಿ ಬದಲು ಸಿಗುತ್ತೆ ಹಣ! ಯಾರಿಗೆ ಎಷ್ಟು ನಗದು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

Spread the love

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಇಂದಿನಿಂದ ಅನ್ನಭಾಗ್ಯ ಅಕ್ಕಿ ಖಾತರಿ ಯೋಜನೆಗೆ ಬದಲಾಗಿ ನೇರ ನಗದು ವರ್ಗಾವಣೆಯನ್ನು ಪ್ರಾರಂಭಿಸಲಿದೆ. ಈ ಹಿಂದೆ ಕೇಂದ್ರ ಸರ್ಕಾರವು ಜೂನ್‌ ನಲ್ಲಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮತ್ತು ಗೋಧಿ ಸಾಗಾಟವನ್ನು ಸ್ಥಗಿತಗೊಳಿಸಿದ ಬಳಿಕ ಈ ನಿರ್ಧಾರವನ್ನು ಮಾಡಲಾಗಿದೆ.

ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಉಚಿತ 10 ಕೆಜಿ ಅಕ್ಕಿ ವಿತರಿಸುವುದಾಗಿ ಆಶ್ವಾಸನೆ ನೀಡಿತ್ತು. ಅಂತೆಯೇ ಗೆಲುವು ಕಂಡಿದ್ದ ಕಾಂಗ್ರೆಸ್ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿತು. ಆದರೆ 5 ಕೆಜಿ ಕೇಂದ್ರದಿಂದ ಬರುತ್ತಿದ್ದ ಮತ್ತು 5 ಕೆಜಿ ರಾಜ್ಯ ನೀಡುವ ಅಕ್ಕಿ ಸೇರಿ 10 ಕೆಜಿ ಘೋಷಣೆ ಮಾಡಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಈ ಸಂದರ್ಭದಲ್ಲಿ ಕೇಂದ್ರವು ರಾಜ್ಯಕ್ಕೆ ಬರುತ್ತಿದ್ದ 5 ಕೆಜಿ ಅಕ್ಕಿ ಸಾಗಾಟವನ್ನು ಸ್ಥಗಿತಗೊಳಿಸಿತು. ಈ ಹಿನ್ನೆಲೆಯಲ್ಲಿ ಸದ್ಯ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಗೆ ಸಮಾನವಾದ ಹಣವನ್ನು ನೀಡಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ.

ಕರ್ನಾಟಕವು 1.28 ಕೋಟಿ ಪಡಿತರ ಚೀಟಿದಾರರನ್ನು ಹೊಂದಿದ್ದು, ಅವರು ನಗದು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಸರ್ಕಾರವು ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳನ್ನು ವರ್ಗಾಯಿಸುತ್ತದೆ. ಅಕ್ಕಿಯ ಜಾಗದಲ್ಲಿ ಒಬ್ಬರಿಗೆ ತಿಂಗಳಿಗೆ 170 ರೂ ಸಿಗಲಿದೆ.


Spread the love

About Ad9 News

Check Also

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: 1 ವಾರದಲ್ಲಿ ಪ್ರಯಾಣಿಸಿದ ಮಹಿಳೆಯರೆಷ್ಟು? ಖರ್ಚಾಗಿದ್ದೆಷ್ಟು?

Spread the love ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಜಾರಿಗೆ ತಂದಿರುವ ಚುನಾವಣಾ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯು …

Leave a Reply

Your email address will not be published. Required fields are marked *