ಮಾಘ ಮಾಸದ ಶುಕ್ಲ ಸಪ್ತಮಿ
ಪರ್ವಕಾಲವು
ಸೂರ್ಯ ದೇವನಿಗೆ ಅರ್ಪಿತ ರಥ ಸಪ್ತಮಿಯು
ಜಗದ ಚೈತನ್ಯದ ಅಧಿಪತಿಯು
ಏಕ ಚಕ್ರ ರಥಾ ರೂಡಾ ಧಿಪತಿಯು
ನವಗ್ರಹದ ಅಧಿಪತಿ ಗ್ರಹ ರಾಜನು
ಸೌರಮಂಡಲದ ರಾಜನು ಆಗಿರುವನು
ಸಪ್ತಾಶ್ವದ ರಥದ ಸಾರ್ವಭೌಮನು
ಎಕ್ಕದ ಎಲೆ, ತಿಲ ಸಮೇತ ಸ್ನಾನ ಪ್ರಿಯನೂ
ಅಜ್ಞಾನವನ್ನು ತೊಡೆದು ಸುಜ್ಞಾನ ನೀಡುವನು
ದಕ್ಷಿಣಾಯನ ದಿಂದ ಉತ್ತರಾ ಯಣದ ಕಡೆ ಪಯಣಿ ಸುವನು
ಮಾಘ ಚಳಿ ಕಳೆದು ಬಿಸಿಲ ತಾಪ ನೀಡುವನು
ಮೈ ಶಾಖ ಹೆಚ್ಚಿಸಿ ಹಗಲನ್ನು ಧೀರ್ಘವಾಗಿಸುವನೀತ
ಅರುಣನ ಸಾರತ್ಯದಲ್ಲಿ ಕಿರಣವ ಬೀರಿ
ಮುದುಡಿದ ಮೈಮನಗಳಿಗೆ ಚೇತನವ ನೀಯುವಾತ
ಹಾಲು ಉಕ್ಕಿಸಿ, ಪಾಯಸದ ನೈವೇದ್ಯ ನೀಡಿ
ಮಂದಾರ ಸಪ್ತಮಿ ಎಂದೂ ಕರೆವ ಪ್ರತೀತಿ
ರೋಗ ರುಜಿನುಗಳ ಹೊಡೆ ದೋಡಿಸಿ
ಸೂರ್ಯ ಕಿರಣದಿ ಗುಣ ಪಡಿಸಿ
ಮನೆ ಮನೆಗಳ ದಾರಿದ್ರ್ಯ ತೊಲಗಿಸಿ
ಇಷ್ಟಾರ್ಥ ಗಳನ್ನು ಕರುಣಿಸಿ ದಿನವೂ ಚೈತನ್ಯ ನೀಡುವ ದೇವಗೆ ನಮೋ ನಮಃ ದ ಆರತಿ.
✍️ *ಮಳೆಬಿಲ್ಲು* ಸಾಹಿತಿ ಲೀಲಾ ಗುರುರಾಜ್, ತುಮಕೂರು