
ಕಾಡುವ ಮಾತುಗಳ
ಮೆರವಣಿಗೆಯಲಿ
ನನ್ನ ಮನ ನಿನಗಾಗಿ
ಮತ್ತೆ ಪಲ್ಲವಿಸಿದೆ
ನನ್ನಂತರಾಳ
ಮಾರ್ದನಿಸುತಿದೆ
ನಿನ್ನ ನೆನಪು ಬಹುವಾಗಿ ಮುತ್ತಲು
ನನ್ನ ಮನ
ಹುಣ್ಣಿಮೆ ಚಂದಿರನಂತೆ
ಮುಗಿಲ ತೊಟ್ಟಿಲಿನ
ನಿನ್ನ ಮಡಿಲಲ್ಲಿ ಮಲಗಿದೆ
ಮೌನ ದಾಟಿ ತೆಪ್ಪಗಿರದ
ಕನಸುಗಳು
ಆಗಾಗ ಬೇಯುತ್ತಿವೆ
ಒಡಲ ಕಿಚ್ಚಿನೊಳಗೆ
ಮೌನದ ಮರೆಯಲಿ
ನಿಂತು
ಮತ್ತೆ ನಿನ್ನ ನೆನಪಿಸಿಕೊಳ್ಳುತ್ತಿವೆ
ನಿನಗೆ ವಿದಾಯ ಹೇಳಲಾಗದೆ…..
ಆ ದಿನವೊಂದನು ಕಾಯುತ್ತೇನೆ
ಚಿಂತೆ ಬಿಡು ನಾ
ಮುಡಿದ ಮಲ್ಲಿಗೆಯದು

Ad9 News Latest News In Kannada