Breaking News

ಪುರುಷನೆಂದರೆ ಯಾರು..!?

Spread the love

ಪುರುಷನೆಂದರೆ ಯಾರು..!?
ದಿಟ್ಟ ಮಹಿಳೆಯ ದಟ್ಟ ಅರಣ್ಯದಿ ಮೊನಚು ಹಲ್ಲು ಗೋರಟು ಉಗುರುಗಳಿಂದ ಆತಿಥ್ಯ ಮಾಡುವವನೇ.!?

ಕೆಂಪು ಹಳದಿ ಬಣ್ಣತೀಡಿ ಕಂಪು ಸೂಸುವ ಭಾವ ಬಂಧನದಿ ಮಡದಿ ಬಾಳಲ್ಲಿ ಕಪ್ಪು ಮಸಿ ರಾಚುವವನೇ..!?

ಹಸುವಿನ ಕವಚ ತೊಟ್ಟ ಪರಸ್ತ್ರೀಯ ಪರಮಾವಧಿಸಲು ಪರಾಕ್ರಮಿಸುವವನೇ..!?

ನಯನದಿ ಅವನಿಗೆ ಭವ್ಯವಾಗಿ ವಂದಿಸುತ್ತಾ ಮನದಲ್ಲಿ ನವ್ಯ ವಿಕಾರ ಕೃತ್ಯಗಳ ಸಕಾರಗೋಳಿಸುವವನೇ..!?

ಧನ್ಯತೆಯಲ್ಲಿ ದ್ರವರೂಪದ ಸ್ಫಟಿಕವಾಗಿ ಧಮನಿಯ ದೌಡಾಯಿಸಿ ಶಮನಗೊಳಿಸುವವನೇ..!?

ವಿನಮ್ರ ವಿದ್ರಾವಕ ವಿತಂಡಕನಾಗಿ ಪರಮ ಪಾಪಗಳನ್ನು ಝರಿಯಾಗಿ ಹರಿಸಿ ಜಲಚರ ಜೀವಿಗಳಂತೆ ಜಾರುಕೊಳ್ಳುವವನೇ..!?

ಸಹೋದರತೆ ಸೋಗು ಸಾರಿ ಅದರಗಳ ಅದರಿಸುತ್ತಾ ಅಸಹಾಯಕ ಮತ್ತು ಅಮಾಯಕ ಹೆಣ್ಣಿನ ಜೀವನ ಜಾಲಾಡಿಸಿ ಪೌರುಷ ಮೇರೆಯುವವನೇ..!?

ಹಗಲೆಲ್ಲಾ ಪರಸಂಗದ ಪಲ್ಲಂಗದಿ ಪುರುಷತ್ವ ಮೆರೆದು ರಾತ್ರಿ ಪತ್ನಿಯ ಮಡಿಲಲ್ಲಿ ಪತಿ ಧರ್ಮ ಬೋಧಿಸುವವನೇ..!?

ನಾರಿಯ ಚೆಲುವನ್ನು ಚಿತ್ರಪಟದಲ್ಲಿ ಬಿಂಬಿಸುವ ಬದಲಾಗಿ ಆಕೆಯ ಬಾಳ ಪುಟದಲ್ಲಿ ಪಟ್ಟದ ಅರಸನಾಗುವವನೇ..!?
ಪುರುಷನೆಂದರೆ ಯಾರು!?

                     

ಅನುಪಮ. ಪಿ✍


Spread the love

About Ad9 News

Check Also

ತೊಟ್ಟಿಲು

Spread the love ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು …

Leave a Reply

Your email address will not be published. Required fields are marked *