ಮರಳುಗಾಡ ಬಿಸಿಲ ಬೇಗೆಯನು ಅನುಭವಿಸಿದೆ ನನ್ನೊಲವೇ
ಸರಿರಾತ್ರಿಯಲಿ ಮನನೊಂದು ಕಣ್ಣೀರು ಹರಿಯುತಿದೆ ನನ್ನೊಲವೇ//
ಒಲವಿನ ರಥದಲಿ ಮೆರವಣಿಗೆ ಹೊರಟಿದೆ ಸಡಗರದಲಂದು ಚೆಂದದಿ
ಕಳಾಹೀನಳಾಗಿ ಭಯದಬೇಗುದಿಯಲಿ ಚಡಪಡಿಸಿದೆ ನನ್ನೊಲವೇ//
ಪ್ರೇಮಕುಸುಮ ಮುಡಿಸಿ ನಲಿಸಿದೆ ಚಂದ್ರಮನಂತೆ ಆ ಚಂದ್ರಿಕೆಯ ಚೆಲುವಲ್ಲಿ
ತಮದ ಕಡಲೊಳಗೆ ತನುಮನವಿಂದು ಬೇಯುತಿದೆ ನನ್ನೊಲವೇ//
ಮರುಭೂಮಿಯ ಝಳದಲೂ ಸಿಗುತಿದೆ ತಂಪು ಸಲಿಲ ಉಕ್ಕುಕ್ಕಿ
ಮರುಮಾತಿಲ್ಲದೇ ಪ್ರೀತಿಯನು
ದೂರ ಸರಿಸಿದೆ ನನ್ನೊಲವೇ//
ಭೋರ್ಗರೆವ ಸಾಗರದಲೆಯದು
ಅಣಕಿಸುತಿದೆ ಎನ್ನೆದೆಯ ಬಯಕೆಗಳ
ಮಾರ್ಗವರಿಯದೆ *ಜಲ* ಳ ಪ್ರೇಮವು ಮೂಕಾಗಿದೆ ನನ್ನೊಲವೇ//
ಆನಂದಜಲ,ಶಿಕ್ಷಕಿ
ತುರುವೇಕೆರೆ