Breaking News

ಬೆಟ್ಟದಂತೆ ಪ್ರೀತಿ ಅಚಲವೆಂದವನು ಅದ ಮರೆಯುವ ಮುನ್ನ ಯೋಚಿಸಬೇಕಾಗಿತ್ತು ನೀ

Spread the love

 

ಬೆಟ್ಟದಂತೆ ಪ್ರೀತಿ ಅಚಲವೆಂದವನು ಅದ ಮರೆಯುವ ಮುನ್ನ ಯೋಚಿಸಬೇಕಾಗಿತ್ತು ನೀ

ಕೊಟ್ಟ ಮಾತನ್ನು ಕಡೆಗಣಿಸಿ ದೂರ ಸರಿಯುವ ಮುನ್ನ ಯೋಚಿಸಬೇಕಾಗಿತ್ತು ನೀ//

ದಟ್ಟಕಾನನದಿ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿದೆ ಮಾನಿನಿಯ ಬದುಕು
ಪಟ್ಟುಬಿಡದೆ ಪಡೆದ ಇಷ್ಟದ ಪ್ರೇಮವನು ಕೈಬಿಡುವ ಮುನ್ನ ಯೋಚಿಸಬೇಕಾಗಿತ್ತು ನೀ//

ಕೆಟ್ಟಘಳಿಗೆಯೊಂದು ಕರಗಿ ಶುಭಕಾಲದ ಆಗಮನವಾಗುವ ಮುನ್ಸೂಚನೆಯಿತ್ತೇ,,?
ನಟ್ಟನಡುವೆಯಲಿ ಕೈಬಿಟ್ಟು ಹೋಗುವ ಮುನ್ನ ಯೋಚಿಸಬೇಕಾಗಿತ್ತು ನೀ//

ಅಷ್ಟೈಶ್ವರ್ಯವ ದೂರತಳ್ಳಿ ಬಂದವಳು ನಿನ್ನ ಅದಮ್ಯ ಒಲವಿಗಾಗಿ ಕಾತರಿಸಿ
ಇಷ್ಟಪಟ್ಟು ಬಂದವಳ ಮನ ನೋಯಿಸುವ ಮುನ್ನ ಯೋಚಿಸಬೇಕಾಗಿತ್ತು ನೀ//

ಜಲ ಳ ಮನವು ಘಾಸಿಗೊಂಡು ತೊಳಲಾಟದ ನೋವಲ್ಲಿ ವ್ಯಥೆಪಡುತಿದೆ
ನಲಿವನ್ನು ಹರಿವತೊರೆಯೊಳಗೆ ಬಿಡುವ ಮುನ್ನ ಯೋಚಿಸಬೇಕಾಗಿತ್ತು ನೀ//

                  ಆನಂದಜಲ,ಶಿಕ್ಷಕಿ

                     ತುರುವೇಕೆರೆ


Spread the love

About Ad9 News

Check Also

ರಥ ಸಪ್ತಮಿಯ ಪರ್ವ ಕಾಲ

Spread the love  ಮಾಘ ಮಾಸದ ಶುಕ್ಲ ಸಪ್ತಮಿ ಪರ್ವಕಾಲವು ಸೂರ್ಯ ದೇವನಿಗೆ ಅರ್ಪಿತ ರಥ ಸಪ್ತಮಿಯು ಜಗದ ಚೈತನ್ಯದ …