Breaking News

3 ಕೋಟಿ ರೂ. ವೆಚ್ಚದ ಲಕ್ಷ್ಮೇಶ್ವರ-ಭೈರನಟ್ಟಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಗ್ರಾಪಂ ಅಧ್ಯಕ್ಷೆ ಜಮೇಲಾ ಮೋಮಿನ

Spread the love

 


ಮೂಡಲಗಿ : ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಿಂದ ಭೈರನಟ್ಟಿವರೆಗಿನ ರಸ್ತೆ ಕಾಮಗಾರಿಗೆ ಸುಣಧೋಳಿ ಗ್ರಾಪಂ ಅಧ್ಯಕ್ಷೆ ಜಮೇಲಾ ಇಮಾಮಸಾಬ ಮೋಮಿನ ಅವರು ರವಿವಾರದಂದು ಗುದ್ದಲಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ಹದಗೆಟ್ಟಿದ್ದ ಭೈರನಟ್ಟಿವರೆಗಿನ ರಸ್ತೆ ಕಾಮಗಾರಿ ಮುಂದಿನ ಕೆಲ ದಿನಗಳಲ್ಲಿ ಅಭಿವೃದ್ಧಿಯಾಗಲಿದ್ದು, ಈ ಕಾಮಗಾರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ಅನುದಾನ ತಂದು ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆಂದು ಜಮೇಲಾ ಮೋಮಿನ ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಈರಪ್ಪ ಹಳ್ಳಿ, ಆನಂದ ಸಿದ್ದುಮಾಳಿ, ಹನಮಂತ ಜೋಗನ್ನವರ, ಮಾರುತಿ ನಡಬಟ್ಟಿ, ಮುಖಂಡರಾದ ಬಸವರಾಜ ಖಿಲಾರಿ, ಗಿರೆಪ್ಪ ಈರಡ್ಡಿ, ಸಂಜೀವ ಗಡಗಿ, ರಾಘವೇಂದ್ರ ಸೂರಣ್ಣವರ, ನಿಂಗಪ್ಪ ತೊಗರಿ, ರಮೇಶ ಗಡಗಿ, ರೇವಣ್ಣಾ ಕನಕಿಕೋಡಿ, ಬಸಲಿಂಗಪ್ಪ ಬಂಬಲವಾಡ, ಮಕ್ತುಮಸಾಬ ಮೋಮಿನ, ಸಿದ್ದಪ್ಪ ಹರಿಜನ, ಬಂದೇನಮಾಜ ಮೋಮಿನ, ಭೀಮಪ್ಪ ಗಿರಡ್ಡಿ, ಪ್ರಕಾಶ ಸನದಿ, ಪದ್ಮಣ್ಣ ಉಂದ್ರಿ, ಬಾಲಚಂದ್ರ ಪಾಟೀಲ, ಸುಲ್ತಾನಸಾಬ ಮೋಮಿನ, ಸದಾಶಿವ ಬಡಿಗೇರ, ಗುತ್ತಿಗೆದಾರ ಕಿರಣ ಗಂಗರಡ್ಡಿ, ಲಕ್ಷ್ಮೇಶ್ವರ ಮತ್ತು ಭೈರನಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Ad9 News

Check Also

ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ವೇಳೆ ಗೈರಾದ ಅಧಿಕಾರಿಗಳು

Spread the love ಮೂಡಲಗಿ : ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ, ತಾಲೂಕು ಆಡಳಿತ, ತಾಲೂಕ ಪಂಚಾಯತ ಮೂಡಲಗಿ ಹಾಗೂ …

Leave a Reply

Your email address will not be published. Required fields are marked *