ಮೂಡಲಗಿ – ಆರ್ಥಿಕವಾಗಿ ಸಹಕಾರಿ ರಂಗದಲ್ಲಿ ಮಹಾಲಕ್ಷ್ಮಿ ಅರ್ಬನ್ ಸೊಸಾಯಿಟಿಯು ಗ್ರಾಹಕರಿಗೆ ವಿಷೇಶ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಎಂದು ಅಧ್ಯಕ್ಷ ಮಲ್ಲಪ್ಪಾ ಗಾಣಿಗೇರ ಹೇಳಿದರು.
ಅವರು ಶನಿವಾರ ಜರುಗಿದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ೩೦ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯ ಶೇರುದಾರರ ಠೇವಣಿದಾರರ ಕಾಳಜಿಯ ಪರಿಣಾಮ ಇಷ್ಟು ಎತ್ತರಕ್ಕೆ ಸಂಸ್ಥೆ ಬೆಳೆಯಲು ಸಾಧ್ಯ ಎಂದ ಅವರು ಸಂಸ್ಥೆಯು ಶೇರು ಬಂಡವಾಳ ೨.೬೯.೪೧.೩೩೨ ಹೊಂದಿ ಠೇವುಗಳು ೭೭,೫೦,೩೦,೮೦೬. ಹೊಂದಿ ನಿಧಿಗಳು ೧೧,೭೮,೮೬,೫೭೯. ಹೊಂದಿ ವಿವಿಧ ಕಡೆ ೨೪,೯೭, ಗುಂತಾವಣಿಗಳನ್ನು ಮಾಡಿ ೬೪,೫೦,೮೭,೪೨೧. ಸಾಲ ವಿತರಿಸಿ ಮಾರ್ಚ ಅಂತ್ಯಕ್ಕೆ ೩,೦೬,೨೦,೪೫೦.೧೬ ನಿವ್ವಳ ಲಾಭ ಹೊಂದಿದೆ ಎಂದರು
ಮುಖ್ಯ ಅತಿಥಿ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ ಮೂಡಲಗಿ ನಗರ ಸಹಕಾರಕ್ಕೆ ಮುನ್ನಡೆ ಬರೆಯಲು ಮಹಾಲಕ್ಷ್ಮಿ ಅರ್ಬನ್ ಸೊಸಾಯಿಟಿ ಕಾರಣಿಬೂತವಾಗಿದೆ.ರಾಜಕೀಯ,ಸಾಮಾಜಿಕ,ಆರ್ಥಿಕ ಸ್ಥಾನಮಾನಗಳನ್ನು ಕೊಡಲು ಸಹಕಾರಿ ರಂಗ ಮುಖ್ಯವಾಗಿದೆ. ಸರಕಾರದ ಕಟ್ಟುನಿಟ್ಟಿನ ಕಾನೂನುಗಳ ನಡುವೆಯೂ ೩೦ವರ್ಷಗಳನ್ನು ಪೊರೈಸಿದ ಈ ಸಂಸ್ಥೆ ಬೆಳೆದು ಹೆಮ್ಮರವಾಗಿದೆ ಎಂದರು.ಬಳಿಕ ಹಣಮಂತ ಪಾರ್ಶಿ ಮಾತನಾಡಿದರು.
ಪ್ರದಾನ ವ್ಯವಸ್ಥಾಪಕರಾದ ಸಿ.ಎಸ್.ಬಗನಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಸಾನಿಧ್ಯವಹಿಸಿ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀದತ್ತಾತ್ರೆಯಬೋಧ ಸ್ವಾಮಿಗಳು ಆಶಿರ್ವಚನ ನೀಡಿದರು,
ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಸಮಯದಲ್ಲಿ ಸನ್ಮಾನಿಸಿದರು,
ವೇಧಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಡಾ ಪ್ರಕಾಶ ನಿಡಗುಂದಿ, ಪ್ರಧಾನ ಕಛೇರಿಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಶಾಖಾ ಸಲಹಾ ಸಮಿತಿಯ ಸದಸ್ಯರಾದ ಬಸಪ್ಪ ಡೋಣಿ,ಭೀಮನಗೌಡ ಪಾಟೀಲ್,ಬಾಳಪ್ಪ ಹಂಜಿ, ಶಂಕರಗೌಡ ಹೊಸಗೌಡ್ರ, ಮಲ್ಲಪ್ಪ ಹೊಸಪೇಠ,ಮಹಾಂತೇಶ ಪಾಟೀಲ್,ಎನ್ ಐ ಶಾನವಾಡ, ಎಸ್ ಬಿ ಮೇಟಿ, ಎಸ್ ಡಿ ಇಟ್ನಾಳ,ಎಸ್ ಎಚ್ ಕದಂ ಉಪಸ್ಥಿತರಿದ್ದರು.
ಅಡಾವೆ ಹಣಮಂತ ದೇಸಾಯಿ, ಕ್ರೋಡಿಕರಣ ಲಾಭಹಾನಿ ಅರ್ಜುನ ಗೋಕಾಕ ಅಂದಾಜು ಲಾಭಹಾನಿ, ಲಾಭ ವಿಭಾಗಣೆ ಸುಭಾಸ ಪುಟ್ಟಿ ಮಂಡಿಸಿದರು, ಅರ್ಜುನ ಗಾಣಿಗೇರ ನಿರೂಪಿಸಿದರು,ವಿಜಯ ನಿಡಗುಂದಿ ವಂದಿಸಿದರು
ಪೋಟೋ ಪೈಲ್ ನೇಮ : ೩ಮೂಡಲಗಿ೧
ಪೋಟೋ ಕ್ಯಾಪ್ಸನ್ : ಶನಿವಾರ ಜರುಗಿದ ಶ್ರೀಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ೩೦ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯು ಅಧ್ಯಕ್ಷ ಮಲ್ಲಪ್ಪಾ ಗಾಣಿಗೇರ ಮಾತನಾಡಿದರು
Check Also
ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …