ಜ್ಞಾನ ದೇಗುಲವಿದು.
ಅಕ್ಷರಗಳನ್ನು ಕಲಿಸುವುದು.
ಭಾಗ್ಯವನ್ನು ದಕ್ಕಿಸುವುದು.
ಸುಂದರ ಪ್ರಕೃತಿಯೊಳಗಿರುವುದು.
ವಿದ್ಯೆಯ ದೇವತೆಯನ್ನು ಆರಾಧಿಸುವುದು.
ಕೈ ಹಿಡಿದು ನಡೆಸುವುದು.
ಇದು ನಮ್ಮ ಶಾಲೆ.
ನಮ್ಮ ಹೆಮ್ಮೆಯ ಎಸ್ ಎಸ್ ಆರ್ ಪ್ರೌಢಶಾಲೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲೆ.
ಆಟ – ಪಾಠಗಳೊಂದಿಗೆ ನಲಿದಿರುವ ಶಾಲೆ.
ನಮ್ಮ ಹೆಮ್ಮೆಯ ಎಸ್ ಎಸ್ ಆರ್ ಪ್ರೌಢಶಾಲೆ.
69 ರ ವಸಂತಕ್ಕೆ ಕಾಲಿಟ್ಟಿರುವುದು.
ಮೂಡಲಗಿಗೆ ಮುತ್ತಿನ ಹಾರವಾಗಿರುವುದು.
ಹಲವಾರು ಸಾಧಕರನ್ನು ಸಮಾಜಕ್ಕೆ ಕೊಟ್ಟಿರುವುದು.
ಇತಿಹಾಸದ ಪುಟದಲ್ಲಿ ಅಜರಾಮರವಾಗಿರುವುದು.
ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು.
ಸಂಬಂಧಗಳ ಬೆಲೆಯನ್ನು ತಿಳಿಸುವುದು.
ಜೀವನದ ಹಾದಿಯನ್ನು ಸುಗಮವಾಗಿಸುವುದು.
ಎಡವದಂತೆ ಹಿಡಿಯುವುದು.
ಕೆಡದಂತೆ ಕಾಪಾಡುವುದು.
ಮಕ್ಕಳ ಏಳಿಗೆಗೆ ಶ್ರಮಿಸುವುದು.
ಈ ಶಾಲೆ,ನಮ್ಮ ಹೆಮ್ಮೆಯ ಎಸ್ ಎಸ್ ಆರ್ ಪ್ರೌಢಶಾಲೆ.
ಪಾಲಕ – ಪೋಷಕರಂತೆ ಸಲಹುವ ಗುರುಗಳು.
ಮಕ್ಕಳ ಏಳಿಗೆಗಾಗಿ ಹಗಲಿರುಳು ಶ್ರಮಿಸುವರು.
ಮಕ್ಕಳ ಕನಸುಗಳೇ ಅವರ ಕನಸುಗಳು ಎಂದು ಭಾವಿಸುವರು.
ಅದ್ಭುತವಾಗಿ ಮಾರ್ಗದರ್ಶನವ ನೀಡುವರು ಹಗಲಿರುಳು.
ಪ್ರೀತಿ – ವಾತ್ಸಲ್ಯದಿಂದ ತುಂಬಿದ ತೋಟ.
ಅಜ್ಞಾನದಿಂದ – ಸುಜ್ಞಾನದ ಕಡೆಗೆ ಒಯ್ಯುವ ತೋಟ.
ಧನಾತ್ಮಕ ದೃಷ್ಟಿಕೋನದಿಂದ ಕೂಡಿರುವ ನೋಟ.
ಹಲವು ಕನಸು ಹೊತ್ತ ಕಂಗಳಿಗೆ ನೀಡುವುದು ಪಾಠ.
ಭಯವನ್ನು ಹೊಡೆದೋಡಿಸಿ ಕರಹಿಡಿದು ನಡೆಸುವುದು.
ವಿಶ್ವಾಸ ಮಂತ್ರವನ್ನು ತುಂಬುವ ಶಾಲೆ.
ನಮ್ಮ ಹೆಮ್ಮೆಯ ಎಸ್ ಎಸ್ ಆರ್ ಪ್ರೌಢಶಾಲೆ.
ಶ್ರೀ. ರಮೇಶ. ಎಸ್. ಬಿರಾದಾರ
9964231143