Breaking News

ಜಾರಕಿಹೊಳಿ ಅಭಿಮಾನಿ ಬಳಗದಿಂದ ಪ್ರತಿಭಟನೆ | ಬಾಲಚಂದ್ರ ಜಾರಕಿಹೊಳಿಯವರಿಗೆ ಸಚಿವಸ್ಥಾನ ನೀಡಿ ಸಿಡಿ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Spread the love


ಮೂಡಲಗಿ : ರಮೇಶ ಜಾರಕಿಹೊಳಿಯವರ ನಕಲಿ ವಿಡಿಯೋ ಖಂಡಿಸಿ ಮೂಡಲಗಿ ತಾಲೂಕಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಟೈಯರ್‍ಗೆ ಬೆಂಕಿ ಹಚ್ಚಿ ರಮೇಶ ಜಾರಕಿಹೊಳಿ ವಿರುದ್ಧದ ಷಡ್ಯಂತ್ರ ಖಂಡಿಸಿ ಪ್ರತಿಭಟನೆ ನಡೆಸಿದರು.
ಬಿಡುಗಡೆಗೊಳಿಸಿರುವ ಸಿಡಿ ಫೇಕ್ ತಂತ್ರಜ್ಞಾನದಿಂದ ಕೂಡಿದ ರಾಸಲೀಲೆ ವಿಡಿಯೋ ಹರಿಬಿಟ್ಟಿದ್ದು, ಇದು ಜಾರಕಿಹೊಳಿ ಕುಟುಂಬದ ವಿರುದ್ಧ ಮಾಡಿರುವ ರಾಜಕೀಯ ವಿರೋಧಿಗಳ ಹುನ್ನಾರ-ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐ ಅಥವಾ ಸಿಓಡಿಗೆ ವಹಿಸಬೇಕೆಂದು ಆಗ್ರಹಿಸಿ ಸ್ಥಳೀಯ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಮುಖಂಡ ಪ್ರಕಾಶ ಮಾದರ ಮಾತನಾಡಿ, ಸಿಡಿ ಬಗ್ಗೆ ಸಮಗ್ರ ತನಿಖೆಗೆ ಸಿಬಿಐ ಆಥವಾ ಸಿಓಡಿಗೆ ನೇಮಿಸಬೇಕು. ರಮೇಶ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆ ಎರಡು ಸ್ಥಾನಗಳನ್ನು ಅರಭಾವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರಿಗೆ ನೀಡಿ ಜಾರಕಿಹೊಳಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಬಿಜೆಪಿ ಯುವ ಮುಖಂಡ ಹಣಮಂತ ಗುಡ್ಲಮನಿ ಮಾತನಾಡಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಮೇಶ ಜಾರಕಿಹೊಳಿಯವರ ವಿಡಿಯೋ ಸತ್ಯಕ್ಕೆ ದೂರವಾದದ್ದು, ಅದ್ದರಿಂದ ಸಮಗ್ರ ತನಿಖೆ ಬಳಿಕ ಸತ್ಯಾಸತ್ಯತೆಗಳು ಆಲಿಸಿದ ನಂತರ ದಿನೇಶ ಕಲ್ಲಹಳ್ಳಿಗೆ ಕಠಿಣ ಶಿಕ್ಷೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ಪಿರೋಜಿ, ಸಂತೋಷ ಸೋನವಾಲ್ಕರ, ಡಾ.ಎಸ್ ಎಸ್ ಪಾಟೀಲ, ರವೀಂದ್ರ ಸೋನವಾಲ್ಕರ, ಅಜೀಜ ಡಾಂಗೆ, ರವೀಂದ್ರ ಸಣ್ಣಕ್ಕಿ, ಮಹಾದೇವ ಶೆಕ್ಕಿ, ಸುಭಾಸ ಸಣ್ಣಕ್ಕಿ, ಅನ್ವರ ನದಾಫ್, ಗಿರೀಶ ಢವಳೇಶ್ವರ, ಜಯಾನಂದ ಪಾಟೀಲ, ಶಿವಪ್ಪ ಚಂಡಕಿ, ರಮೇಶ ಸಣ್ಣಕ್ಕಿ, ಯಲ್ಲಾಲಿಂಗ ವಾಳದ, ಚೇತನ ನಿಶಾನಿಮಠ, ಹನಮಂತ ಸತರಡ್ಡಿ, ಮಲೀಕ ಹುಣಶ್ಯಾಳ, ಹುಶೇನಸಾಬ ಶೇಖ, ಬಸು ಝಂಡೆಕುರಬರ, ಆನಂದ ಟಪಾಲ ಹಾಗೂ ಅನೇಕ ಮುಖಂಡರು ಇದ್ದರು.
ನಾಗನೂರ, ಜಾರಕಿಹೊಳಿ ಅಭಿಮಾನಿ ಬಳಗದಿಂದ ಟಾಯರ್‍ಗೆ ಬೆಂಕಿ ಹಚ್ಚಿ ಆಕ್ರೋಷ, ಮನವಿ
ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದಲ್ಲೂ ಜಾರಕಿಹೊಳಿ ಅಭಿಮಾನಿ ಬಳಗದದಿಂದ ಪ್ರಮುಖ ವೃತ್ತದಲ್ಲಿ ಟಯರಗೆ ಬೆಂಕಿ ಹಚ್ಚಿ ಆಕ್ರೋಷ ವ್ಯಕ್ತಪಡಿಸಿ ನಕಲಿ ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ,ಸಿ ಎಲ್ ಬೆಳಗಲಿ, ಬಸವರಾಜ ಹಳಿಗೌಡರ, ಶಂಕರ ಹೊಸಮನಿ, ಬಸವರಾಜ ಕರಿಹೊಳಿ, ಪಿ ಎಲ್ ಬಬಲಿ, ವಿಠ್ಠಲ ಗುಡೆನ್ನವರ, ರಾಜು ಕರಿಹೊಳಿ, ಗಜು ಯರಗಣವಿ, ಧನು ಜೋಕಿ, ಶಂಕರ ದಳವಾಯಿ, ಸಿದ್ದಪ್ಪ ಗೋಟೂರ, ಮಾರುತಿ ಕರಬಣ್ಣವರ ಮುಂತಾದವರು ಇದ್ದರು.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …