Breaking News

ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ

Spread the love

 

ಮೂಡಲಗಿ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ೨೦೨೩ ರ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅಧ್ಯಕ್ಷತೆಯಲ್ಲಿ ಜರುಗಿತು.
ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿ, ಮುಂಬರುವ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ೨೮೧ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಅರಭಾವಿ ಮತ ಕ್ಷೇತ್ರದ ಸೇಕ್ಟರ ಅಧಿಕಾರಿಗಳು ಮತಗಟ್ಟೆಗಳಿಗೆ ಖುದ್ದಾಗಿ ಪರೀಶಿಲಿಸಿ ವರದಿ ಸಲ್ಲಿಸಬೇಕೆಂದು ಹೇಳಿದರು.


ಸಭೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳಾದ ತಾ.ಪಂ ಇ.ಒ ಎಫ್.ಜಿ.ಚಿನ್ನನವರ, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿ ಯಲ್ಲಪ್ಪ ಗದಾಡಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಗ್ರೇಡ್ ಟು ತಹಶೀಲ್ದಾರ ಶಿವಾನಂದ ಬಬಲಿ, ಚುನಾವಣಾ ಶಿರಸ್ತೆದಾರ ಪಿ.ಕೆ.ನಾಯ್ಕ, ಚುನಾವಣೆ ವಿಷಯ ನಿರ್ವಹಕ ಪಿ.ಎಸ್.ಕುಂಬಾರ ಹಾಗೂ ೨೦ ಜನ ಚುನಾವಣಾ ಸೇಕ್ಟರ ಅಧಿಕಾರಿಗಳು ಉಪಸ್ಥಿತರಿದ್ದರು


Spread the love

About Ad9 News

Check Also

ಮೂಡಲಗಿ-ಧರ್ಮಸ್ಥಳ ನೂತನ ಬಸ್ಸ್ ಸೇವೆ ಆರಂಭ

Spread the love ಮೂಡಲಗಿ: ಮೂಡಲಗಿ ಹಾಗೂ ಸುತ್ತಮುತ್ತಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೂಡಲಗಿ-ಧರ್ಮಸ್ಥಳ ಬಸ್ಸ್ ಸೇವಗೆ ಶಾಸಕ ಬಾಲಚಂದ್ರ …

Leave a Reply

Your email address will not be published. Required fields are marked *