ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ
ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ
ಮನೆಯ ಸೂರು ಕಾಲನ ಹೊಡೆತಕೆ ಸಡಿಲಾಗಿದೆ
ಜೀವ ಹೊಸ ಸೂರಿನ ಆಸರೆ ಹುಡುಕಿ ಸಾಗಿದೆ
ಪ್ರಾಣ ಜಲವಾಗಿದ್ದ ಬಾವಿಯ ಸೆಲೆ ಬತ್ತಿದೆ
ದಾಹ ತಣಿಸಲು ನದಿಯನರಸಿ ವಲಸೆ ಹೋಗಿದೆ
ಎದೆಯ ಕ್ಷೀರ ಉಣಿಸಿದವಳು ಹಣ್ಣೆಲೆಯಾದಳು
ಚಿಗುರೆಲೆ ಬಣ್ಣದ ಕನಸನರಸಿ ಪಯಣ ಬೆಳೆಸಿದೆ
‘ಆರಾಧ್ಯೆ’ “ಕಾಣದ ಕಡಲಿಗೆ ಮನ ಹಂಬಲಿಸಿದೆ”
ಜಾಗತೀಕರಣದ ಹೆಸರಲಿ ತಾಯಿಬೇರು ನಲುಗಿದೆ
ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ