Breaking News

Ad9 News

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದು, 31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 4.37 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರದಂದು ಸಮೀಪದ ಮದಲಮಟ್ಟಿ(ಶಿವಾಪೂರ-ಹ) ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ 13.90 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಿವೇಕ ಶಾಲಾ ಕೊಠಡಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, …

Read More »

16 ಕೋಟಿ ರೂ. ಆರ್‍ಡಿಪಿಆರ್ ಇಲಾಖೆಯ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ರಸ್ತೆಗಳ ಅಭಿವೃದ್ಧಿಗಾಗಿ ಆರ್‍ಡಿಪಿಆರ್ ಇಲಾಖೆಯಿಂದ 16 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಮಾರ್ಚ ತಿಂಗಳೊಳಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರದಂದು ಇಲ್ಲಿಗೆ ಸಮೀಪದ ಗುರ್ಲಾಪೂರ ಕ್ರಾಸ್ ಹತ್ತಿರ 1.30 ಕೋಟಿ ರೂ. ವೆಚ್ಚದ ಗುರ್ಲಾಪೂರ-ಇಟ್ನಾಳ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಕಾಮಗಾರಿಗಳ …

Read More »

ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಸವರಾಜಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ಪಟ್ಟಣದ ಹಡಪದ ಅಪ್ಪಣ್ಣನವರ ದೇವಸ್ಥಾನದ ಆವರಣದಲ್ಲಿ ಮೂಡಲಗಿ ತಾಲೂಕು ಮಟ್ಟದ ಹಡಪದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಫೇಬ್ರುವರಿ 17ರಿಂದ ಬಜೆಟ್ ಅಧಿವೇಶನ ಮಂಡನೆಯಾಗುವುದರಿಂದ ಅದರ ಪೂರ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು. ಹಡಪದ …

Read More »

ಸಂಘಟಿತ ಹೋರಾಟದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ: ಶಾಸಕ ರಮೇಶ ಜಾರಕಿಹೊಳಿ

ಸಂಘಟಿತ ಹೋರಾಟದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ: ಶಾಸಕ ರಮೇಶ ಜಾರಕಿಹೊಳಿ ಗೋಕಾಕದಲ್ಲಿಂದು ಕ್ಷತ್ರೀಯ ಮರಾಠಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿದ ರಮೇಶ ಜಾರಕಿಹೊಳಿ. ಗೋಕಾಕ: ಕ್ಷತ್ರೀಯ ಮರಾಠಾ ಸಮಾಜದವರು ಸಂಘಟಿತರಾದರೆ ಜಿಲ್ಲೆಯ ೧೮ ವಿಧಾನ ಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ೧೦ಕ್ಷೇತ್ರಗಳಲ್ಲಿ ನಿರ್ಣಾಯಕರಾಗುತ್ತಾರೆ. ಅದರಲ್ಲಿ ಮೂರು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲವು ಸಾಧಿಸಬಹುದು ಎಂದು ಗೋಕಾಕ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಭಾನುವಾರದಂದು ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ …

Read More »

ಜಾರಕಿಹೊಳಿ ಸಾಮ್ರಾಜ್ಯ ನಿರ್ಮಿಸುವಲ್ಲಿ ಕಲಾಲ ಸಮಾಜದ ಕೊಡುಗೆ ಅಪಾರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕಲ್ಲೋಳಿ ಪಟ್ಟಣದಲ್ಲಿ ಮೂಡಲಗಿ-ಗೋಕಾಕ ತಾಲೂಕುಗಳ ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ಸಮಾವೇಶದಲ್ಲಿ ಈ ಹೇಳಿಕೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಕಳೆದ ಐದು ದಶಕಗಳ ಹಿಂದೆ ನಮ್ಮ ಕುಟುಂಬ ಸ್ಥಾಪಿಸಿರುವ ಸಾಮ್ರಾಜ್ಯದಲ್ಲಿ ಕಲಾಲ ಸಮಾಜದವರ ಪರಿಶ್ರಮ ಅಪಾರವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದ ನಿಯೋಜಿತ ಬಲಭೀಮ ದೇವರ ಕಲ್ಯಾಣ ಮಂಟಪದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕುಗಳ ಸೂರ್ಯವಂಶ …

Read More »

ಪೆ.13ರಂದು ಪಟ್ಟಣದ ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಬೃಹತ ಸಮಾವೇಶ

ಮೂಡಲಗಿ : ಹಡಪದ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಗಾಗಿ ನಮ್ಮ ಸಮಾಜದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ, ಫೆ.13ರಂದು ಪಟ್ಟಣದ ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಡಪದ ಸಮಾಜದ ತಾಲೂಕಾಧ್ಯಕ್ಷ ಶಿವಬೋಧ ಉದಗಟ್ಟಿ ಹೇಳಿದರು. ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಡಪದ ಸಮಾಜದ ಜನರಿಗೋಸ್ಕರ ತಾಲೂಕಿನ ಪತ್ರಿ ಹಳ್ಳಿಗಳಲ್ಲಿ ಸಭಾಭವನ ನಿರ್ಮಾಣ, …

Read More »

ವಿಶ್ವಕರ್ಮ ಸಮಾಜದ ಮುಖಂಡರು ಸಮಾವೇಶದ ಕರಪತ್ರ ಬಿಡುಗಡೆ

ಮೂಡಲಗಿ : ವಿಶ್ವಕರ್ಮ ಸಮಾಜದ ಜನರಿಗೆ ಸ್ಥಳೀಯ ಗ್ರಾಪಂ, ಪುಸರಭೆ, ಜಿಪಂ ಗಳಲ್ಲಿ ಸ್ಥಾನಮಾನ ನೀಡಬೇಕು ಹಾಗೂ ನಮ್ಮ ಸಮಾಜಕ್ಕೆ ಸರ್ಕಾರದಿಂದ ಬರುವಂತ ಸೌಲಭ್ಯಗಳ ಕುರಿತು ಸಮಾಜದ ಜನರಿಗೆ ಮಾಹಿತಿ ನೀಡಿ ಸಮಾಜದ ಜನರನ್ನು ಒಗ್ಗೂಡಿಸುವ ಸಲುವಾಗಿ ಫೆ.14ರಂದು ಪಟ್ಟಣದ ಬಸವ ಮಂಟಪದಲ್ಲಿ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಗಜಾನನ ಪತ್ತಾರ ಹೇಳಿದರು. ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ …

Read More »

ತೊಟ್ಟಿಲು

ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು ಅದರ ವಾಸಸ್ಥಾನದ ಕೂಗೆ ಜೋಜೋ ಲಾಲಿ ಮಡಿಲು ಚನ್ನಪಟ್ಟಣದ ಮರದ ತೊಟ್ಟಿಲು ಹಾಲುಗಲ್ಲದ ಕಂದಮ್ಮಗಳ ಚಂದದ ಮಡಿಲು ಅಮ್ಮನ ನಂತರದ ಸ್ಥಾನ ನೀನೇ ಅಲ್ಲವೇ ನಿನ್ನ ತೂಗಿಸಿ ನಿದ್ದೆಗೆ ಜಾರಿಸು ವರಲ್ಲವೇ ಮಹಾಸತಿ ಅನುಸೂಯ ತ್ರಿಮೂರ್ತಿ ಗಳನ್ನು ಅಲ್ಲವೇ ಯಶೋದೆ ಕೃಷ್ಣನನ್ನು ನಿನ್ನಲ್ಲಿ ತೂಗಿಸಿ ಮಲಗಿಸಲಿಲ್ಲವೇ ತೊಟ್ಟಿಲಿರುವ ಮನೆ ಕಂದನ ಕಳೆಯಲ್ಲವೇ ಮಗುವಿನ …

Read More »

ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲ

ಭಾರತದ ಕುವರಿ ಈ ಪೋರಿ ತನ್ನಯ ಜಾಣ್ಮೆಯಲ್ಲೇ ಎದ್ದ ಕುಮಾರಿ ಎಲ್ಲದರಲ್ಲೂ ಮೊದಲಿಗಳೂರಿ ಅವಳೇ ನಮ್ಮ ಕಲ್ಪನಾ ಚಾವ್ಲ ರೀ ವೈಮಾನಿಕ ವಿಷಯದಲ್ಲಿ ಆಸಕ್ತಿಯು ಇವಳ ಬುದ್ದಿವಂತಿಕೆಯ ಕಂಡಿಹರು ನಾಸಾ ದಲ್ಲೇ ಕೆಲಸ ಖಾಯಂ ಮಾಡಿದರು ಅವಳ ಉಜ್ವಲ ಭವಿಷ್ಯ ಬೆಳಕಾಯ್ತು ತಂದೆ ತಾಯಿಯರ ಕಣ್ಮಣಿ ಯಾಗಿದ್ದಳು ಗಗನದಲ್ಲೇ ಯಾನ ಮಾಡು ತ್ತಿದ್ದಳು ಸಾಧನೆ ಶಿಖರವನ್ನು ಏರಿದ್ದಳು ನಾಸಾ ದಲ್ಲೇ ಕೆಲಸ ಗಿಟ್ಟಿಸಿಕೊಂಡ ಭಾರತೀಯ ಮಗಳು ತನ್ನ ಕನಸ ತಾನೇ …

Read More »

ಎನ್ನ ಮನದೊಡತಿ

❤️ಸುಂದರ ಬೆಳದಿಂಗಳ ತಂಪಿನಲಿ ನಿನ ನೆನೆಯುತಾ ತಂಗಾಳಿ ಸಂತೆಯಲಿ ಒಂದಿರುಳ ಕನಸಲಿ ನೆನೆಸಿ ಕೊಂಡೆ ಆ ನನ್ನ ನಿನ್ನ ಮೊದಲ ಪರಿಚಯದ ನೆನಪ❤️ ❤️ನೀ ನಂದು ಬಂದಿದ್ದೆ ನಮ್ಮತ್ತೆ ಮನೆಗೆ ಹೋಳಿ ಹುಣ್ಣಿಮೆಯ ಕಾಮನ ಹಬ್ಬದಲ್ಲಿ ಎಲ್ಲರೂ ಬಣ್ಣದೋಕುಳಿಯನು ಎರಚಾಡುತ್ತಿದ್ದಾಗ ನೀ ನನಗೆ ಬಣ್ಣ ಬಳಿದೆ ನನ್ನೊಲವಿನ ಎದೆಯ ಮೇಲೆ❤️ ❤️ನಮ್ಮಮ್ಮನ ಪುಸಲಾಯಿಸಿ ಕರೆ ಕೊಟ್ಟೆ ನಿನಗೆ ನೀ ಮನೆಗೆ ಕಾಲಿಟ್ಟೆ ಘಲ್ ಎಂಬ ಗೆಜ್ಜೆ ನಾದದೊಂದಿಗೆ ನನ್ನೆದೆಯು ಬಡಿದು …

Read More »