Breaking News

ಮೂಡಲಗಿ

ಜಂಬೂ ಸವಾರಿಗೆ ಮೆರಗು ನೀಡಿದ ತಾಲೂಕಿನ ವಿವಿಧ ಕಲಾತಂಡಗಳು

  ಮೂಡಲಗಿ: ಪಟ್ಟಣದ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 28ನೇ ವರ್ಷದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ಉತ್ಸವ ಹಾಗೂ ಭವ್ಯ ಮೆರವಣಿಗೆಗೆ ಸೋಮವಾರ ಸಂಜೆ ಜರುಗಿತು. ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಹೊತ್ತಿರುವ ಆನೆಯ ಅಂಬಾರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಷಂಬಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಪಟ್ಟಣದ ಅಯ್ಯಪ್ಪ …

Read More »

ಪ್ರಥಮ ಪ್ರಾಶಸ್ತ್ಯದಲ್ಲಿಯೇ ಕವಟಗಿಮಠ ಗೆಲುವು : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ವಿಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಪ್ರಥಮ ಪ್ರಾಶಸ್ತ್ಯದಲ್ಲಿಯೇ ಜಯ ಗಳಿಸಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರದಂದು ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮತ ಚಲಾಯಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಗೆಲುವಿನಿಂದ ಅರಭಾವಿ ಕ್ಷೇತ್ರವೂ ಸೇರಿದಂತೆ ಇಡೀ ಜಿಲ್ಲೆಯೂ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು. ಇದೇ ಮೊದಲ ಬಾರಿಗೆ ವಿಧಾನ ಪರಿಷತ್ …

Read More »

ಪುನೀತ ರಾಜಕುಮಾರ ಕ್ರಾಸ್ ನಾಮಫಲಕ ಉದ್ಘಾಟನೆ

  ಮೂಡಲಗಿ : ಕರುನಾಡಿನ ಯುವರಾಜ ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ ಅಕಾಲಿಕವಾಗಿ ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಂಡ ಘಟನೆ ನಮ್ಮೆಲ್ಲರನ್ನೂ ಸ್ತಂಭೀಭೂತರನ್ನಾಗಿಸಿದೆ ಎಂದು ಉಪನ್ಯಾಸಕ ವಾಯ್ ಬಿ ಕಳ್ಳಗುದ್ದಿ ಹೇಳಿದರು. ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಗ್ರಾಮದ ನವನಗರ ಕ್ರಾಸ್‌ವನ್ನು “ಪುನೀತ್ ರಾಜಕುಮಾರ ಕ್ರಾಸ್” ವೆಂದು ಮರುನಾಮಕರಣದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ ಅವರ ಅಗಲಿಕೆಯ ನೋವು, ಸ್ಮರಣೆ, ನೆನಪು ಮಾತ್ರ ನಿರಂತರವಾಗಿ ಸಾಗಿದೆ. …

Read More »

ಮಠಗಳಿಗೆ ಭಕ್ತರೇ ನಿಜವಾದ ಆಸ್ತಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಠ-ಮಾನ್ಯಗಳಿಗೆ ಭಕ್ತ ಸಮುದಾಯವೇ ನಿಜವಾದ ಆಸ್ತಿ. ಶ್ರೀ ಮಠದ ಶ್ರೇಯೋಭಿವೃದ್ಧಿಗೆ ಭಕ್ತರೂ ಸಹ ತಮ್ಮ ತನು-ಮನ-ಧನದಿಂದ ಸಹಕಾರ ನೀಡುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ರವಿವಾರ ಸಂಜೆ ಜಡಿಸಿದ್ಧೇಶ್ವರ ಮಠದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಮಠಗಳ ಉನ್ನತಿಗಾಗಿ ಈ ಭಾಗದಲ್ಲಿ ಧಾರ್ಮಿಕ ವಾತಾವರಣ ನಿರ್ಮಿಸುತ್ತಿರುವ ಮಠಗಳಿಗೆ ಭಕ್ತರು ತಮ್ಮ ವೈಯಕ್ತಿಕ ಮನಸ್ತಾಪಗಳನ್ನು ಮರೆತು …

Read More »

ಸಿಡಿಲು ಬಡಿದು ಸ್ಥಳದಲ್ಲೇ ಸಾವು

ಮೂಡಲಗಿ : ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು  ಭೀಮಶಪ್ಪ ಸಾಸಪ್ಪ ಗೋಣಿ (64) ಎಂಬುವರು ಹೊಲದಲ್ಲಿ ಬದನೆಕಾಯಿ ಹರಿವ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Read More »

ನದಿ ತೀರದ ಗ್ರಾಮಗಳ ಸಂತ್ರಸ್ಥ ಕುಟುಂಬಗಳಿಗೆ ಶೀಘ್ರ ವಸತಿ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಪ್ರವಾಹ ಹಾಗೂ ಅತೀವೃಷ್ಟಿಯಿಂದಾಗಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಡಾಟಾ ಎಂಟ್ರಿ ಆದ ಸಂತ್ರಸ್ತ ಕುಟುಂಬಸ್ಥರಿಗೆ ಆದಷ್ಟು ಬೇಗನೇ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ತಹಶೀಲ್ದಾರ ಕಛೇರಿಯಲ್ಲಿ ಕಳೆದ ಸೋಮವಾರದಂದು ಮೂಡಲಗಿ ಹಾಗೂ ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂತ್ರಸ್ಥ ಕುಟುಂಬಸ್ಥರಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ …

Read More »

ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ‘ಕನ್ನಡ ರಾಜ್ಯೋತ್ಸವ ಆಚರಣೆಯೊಂದಿಗೆ ಕನ್ನಡ ನಾಡು, ನುಡಿಯ ಬಗ್ಗೆ ಪ್ರೀತಿ, ಅಭಿಮಾನದ ಬದ್ಧತೆ ಇರಬೇಕು’ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಪಟ್ಟಣದಲ್ಲಿ ಸೋಮವಾರದಂದು ಕನ್ನಡಪರ ಸಂಘಟನೆಗಳ ಆಶ್ರಯದೊಂದಿಗೆ ಜರುಗಿದ ಕನ್ನಡ ರಾಜ್ಯೋತ್ಸವದ ಮೆರವಣ ಗೆ ನಿಮಿತ್ಯ ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅತ್ಯಂತ ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ನಾಡಿನ ಹಿರಿಮೆಯು ವಿಶ್ವವ್ಯಾಪ್ತಿಯಾಗಿ ಬೆಳೆದಿದೆ …

Read More »

ಮುನ್ಯಾಳದಲ್ಲಿ 22ಲಕ್ಷ ರೂ ವೆಚ್ಚದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಏಳನೇ ತರಗತಿ ನಂತರ ವಿದ್ಯಾರ್ಥಿಗಳು ಪ್ರೌಢಶಾಲೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಮೂಡಲಗಿ ಶೈಕ್ಷಣ ಕ ವಲಯಕ್ಕೆ ಅತೀ ಹೆಚ್ಚಿನ ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸಲಾಗಿದೆ, ಇದರಿಂದ ಗ್ರಾಮೀಣ ಪ್ರದೇಶದಲ್ಲಿನ ಅದರಲ್ಲೂ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮುಂದಿನ ದಿನಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಹಕಾರಿಯಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಅವರು ಭಾನುವಾರ ಸಂಜೆ ಸಮೀಪದ ಮುನ್ಯಾಳ ಗ್ರಾಮದ ಸರಕಾರಿ …

Read More »

ಹೈಮಾಸ್ಟ್ ಟವರ್ ಉದ್ಘಾಟನೆ ಮಾಡಿದ ರಾಹುಲ ಸತೀಶ ಜಾರಕಿಹೊಳಿ

  ಮೂಡಲಗಿ:  ತಾಲೂಕಿನಲ್ಲಿ ನಾಗನೂರ ಗ್ರಮದ ಮನ್ನಿಕೇರಿ ಪೆಟ್ರೋಲಿಯಂ ಉತ್ಸವದಲ್ಲಿ ಯುವ ನಾಯಕ ರಾಹುಲ ಸತೀಶ ಜಾರಕಿಹೊಳಿ ಯವರು ಹೈಮಾಸ್ಟ್ ಟವರ್ ಉದ್ಘಾಟನೆ ಮಾಡಿದ್ದರು. ಅದೆ ಸಂದರ್ಭದಲ್ಲಿ ಮನ್ನಿಕೇರಿ ಪೆಟ್ರೋಲಿಯಂ ಉತ್ಸವದ ಧಮಾಕಾ ಬಹುಮಾನ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂದರ್ಭದಲ್ಲಿ ಬಸಗೌಡ ಪಾಟೀಲ ಜೆ ಜಿ ಕೋ ಹಾಸ್ಪಿಟಲ್, ನಿರ್ದೇಶಕರು ಘಟಪ್ರಭಾ ಮಲ್ಲಿಕಾರ್ಜುನ ಕಬ್ಬುರ ಮರೆಪ್ಪ ಮರಪಾಗೋಳ , ಅದಿವಪ್ಪ ಹಾದಿಮನಿ, ಗ್ರಾಮ ಪಂಚಾಯತಿ ಅಧ್ಯಕ್ಷರು …

Read More »

ಅನ್ಯ ಭಾಷೆಯನ್ನು ಬಳಸದೇ ಕನ್ನಡದಲ್ಲಿ ನಾಲ್ಕು ನಿಮೀಷ ಮಾತನಾಡುವ ಸ್ವರ್ಧೆ

  ಮೂಡಲಗಿ : ಸರ್ಕಾರ ಆದೇಶದ ಅನ್ವಯ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಅ.28ರಂದು ಮುಂಜಾನೆ 11 ಗಂಟೆಗೆ ಇಡೀ ರಾಜ್ಯಾದಾದ್ಯಂತ ಏಕ ಕಾಲಕ್ಕೆ “ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೇ ಕನ್ನಡ ನಾಡಿನಲ್ಲೇ ಹುಟ್ಟಬೇಕು” ಈ ಗೀತೆಗಳನ್ನು ಏಕ ಕಾಲಕ್ಕೆ ಹಾಡಲು ಪಟ್ಟಣದ ಎಸ್.ಎಸ್.ಆರ್ ಕಾಲೇಜ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹಾಗೂ ತಾಲೂಕಿನ ಪತ್ರಿಯೊಂದು ಗ್ರಾಮದಲ್ಲಿ ಈ ಕಾರ್ಯಾಕ್ರಮವನ್ನು ನೇರವೇರಿಸಲು ಗ್ರಾಪಂ ಪಿಡಿಓ ಹಾಗೂ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ …

Read More »