Breaking News
Home / ಮೂಡಲಗಿ (page 17)

ಮೂಡಲಗಿ

೪.೮೦ ಕೋಟಿ ರೂ ಅನುದಾನದಲ್ಲಿ ಸುಣಧೋಳಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ

ಮೂಡಲಗಿ: ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕಹಾಮಾ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃಧಿ ಪಡಿಸುತ್ತಿದ್ದಾರೆ. ಈಂತಹ ಶಾಸಕರು ಪಡೆದಿರುವುದು ಪುಣ್ಯ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದರು. ಅವರು ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸುಣಧೋಳಿಕ್ರಾಸ್‌ದಿಂದ ಸುಣಧೋಳಿ ಗ್ರಾಮದವರಿಗೆ ಸುಮಾರು ಮೂರು ಕಿ.ಮಿ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯ ೪.೮೦ ಕೋಟಿ ರೂಪಾಯಿ ಅನುದಾನದಲ್ಲಿ …

Read More »

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಬಹುಮುಖ ಪ್ರತಿಭೆಗಳನ್ನು ಕಾಣಲು ಸಾಧ್ಯ : ಬಿಇಒ ಅಜಿತ ಮನ್ನಿಕೇರಿ

  ಮೂಡಲಗಿ: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗೆ ಅಗತ್ಯ ಅವಕಾಶ ದೊರಕಿಸಿಕೊಟ್ಟಾಗ ಮಾತ್ರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಬಹುಮುಖ ಪ್ರತಿಭೆಗಳನ್ನು ಕಾಣಲು ಸಾಧ್ಯ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-೨೦೨೨ ಕಾರ್ಯಕ್ರಮದ ಪ್ರಯುಕ್ತ ಚೈತನ್ಯ ಪ್ರಾಥಮಿಕ ಪ್ರೌಢ ಶಾಲೆ, ಮೇಘಾ ಪ್ರಾಥಮಿಕ ಪ್ರೌಢ ಶಾಲೆ, ಶ್ರೀ ಎಲ್.ವಾಯ್ ಅಡಿಹುಡಿ ಪ್ರಾಥಮಿಕ …

Read More »

ಮೂಡಲಗಿ ಶೈಕ್ಷಣ ಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ

ಮೂಡಲಗಿ: ಮೂಡಲಗಿ ಶೈಕ್ಷಣ ಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2022 ಕಾರ್ಯಕ್ರಮವು ಸ. 26 ಸೋಮವಾರದಂದು ಬೆಳಗ್ಗೆ 10 ರಿಂದ 5ರವರೆಗೆ ಆಯೋಜಿಸಲಾಗಿದೆ. 1 ರಿಂದ 4ನೇ ತರಗತಿ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಾಗನೂರಿನ ಚೈತನ್ಯ ಆಶ್ರಮ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, 5 ರಿಂದ 7ನೇ ತರಗತಿ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಾಗನೂರಿನ ಮೇಘಾ ಕನ್ನಡ ಮತ್ತು ಆಂಗ್ಲ ಮಾಧ್ಯಮ …

Read More »

ಬಿಜೆಪಿ ಅರಭಾವಿ ಮಂಡಲದಿಂದ ಸೇವಾ ಪಾಕ್ಷಿಕ ಅಭಿಯಾನಕ್ಕೆ ಚಾಲನೆ

ಮೂಡಲಗಿ  : ನರೇಂದ್ರ ಮೋದಿಯವರ ಜನುಮದಿನದ ಅಂಗವಾಗಿ ವಿಶೇಷ ಗೌರವ ಅರ್ಪಿಸುವ ಪ್ರಯುಕ್ತ ದೇಶಾದ್ಯಂತ ಭಾರತೀಯ ಜನತಾ ಪಕ್ಷದ ವತಿಯಿಂದ “ಸೇವಾ ಪಾಕ್ಷಿಕ” ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು ಶನಿವಾರದಂದು ಪಟ್ಟಣದ ಸಮುದಾಯ ಆರೋಗ್ಯಕೇಂದ್ರದಲ್ಲಿ, ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿಯಾನಕ್ಕೆ, ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿಯವರ …

Read More »

ಪುರಸಭೆ ವಿರುದ್ಧ ಕೆ ಆರ್ ಎಸ್ ಹಾಗೂ ವಿವದ ಸಂಘಟನೆಗಳ ಪ್ರತಿಭಟನೆ

ಮೂಡಲಗಿ: ಪುರಸಭೆಯ ಜಾಗಗಳ ಅನದಿಕೃತವಾಗಿ ಅತಿಕ್ರಮಿಸಿರುವದು, ಟೆಂಡರ ಪ್ರಕ್ರಿಯೆ ಇಲ್ಲದೇ ನೇರ ನೇಮಕಾತಿ ಪ್ರಶ್ನಿಸಿ ಹಾಗೂ ವಿಕಲಾಂಗರಿಗೆ ದೊರೆಯುವ ದ್ವಿಚಕ್ರಗಳನ್ನು ವಾಹನಗಳನ್ನು ಯಾವ ಆಧಾರದ ಮೇಲೆ ಫಲಾನುಭವಿಗಳಿಗೆ ವಿತರಿಸಲಾಗಿರುವ ಕುರಿತು ಹಲವಾರು ಬಾರಿ ಲಿಖಿತವಾಗಿ ಕೇಳಿದರೂ ಉತ್ತರಿಸದ ಸ್ಥಳೀಯ ಪುರಸಭೆಯ ವಿರುದ್ದ ಪುರಸಭೆ ಕಚೇರಿ ಮುಂದೆ ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಗುರುವಾರ ಕೆಲ ವೇಳೆ ಪ್ರತಿಭಟಿಸಿ ಧರಣ ನಡೆಸಿದರು. ಈ …

Read More »

ಸೆ. 18 ರಂದು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಉಪ್ಪಾರ ಯುವ ಸಮಾವೇಶ

ಮೂಡಲಗಿ:  ರಾಜ್ಯದಲ್ಲಿ 70ರಿಂದ 80ಲಕ್ಷ ಜನಸಂಖ್ಯೆ ಹೊಂದಿದ್ದರೂ 40 ವರ್ಷದಿಂದ ಉಪ್ಪಾರ ಸಮಾಜವನ್ನು ಗುರುತಿಸಿ ಗೌರವ ಸ್ಥಾನಮಾನ ಅಥವಾ ರಾಜಕೀಯ ಸ್ಥಾನಮಾನ ನೀಡುವಂತಹ ಕೆಲಸ ನಮ್ಮ ರಾಜ್ಯದಲ್ಲಿ ಯಾವುದೇ ಪಕ್ಷದಿಂದ ಅಥವಾ ಸರ್ಕಾರದಿಂದ ಆಗಿಲ್ಲ ಎಂದು ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ ವಿಷ್ಣು ಲಾತೂರ ಹೇಳಿದರು. ಅವರು ಮಂಗಳವಾರ ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಸರ್ಕಾರದ ಗಮನ ಸೆಳೆಯಲು ಹಲವಾರು ಸಮಾವೇಶ …

Read More »

ಮಹಾಲಕ್ಷ್ಮಿ ಸೊಸಾಯಿಟಿಗೆ ೩,೬ ಕೋಟಿ ಲಾಭ – ಅದ್ಯಕ್ಷ ಗಾಣಿಗೇರ

ಮೂಡಲಗಿ – ಆರ್ಥಿಕವಾಗಿ ಸಹಕಾರಿ ರಂಗದಲ್ಲಿ ಮಹಾಲಕ್ಷ್ಮಿ ಅರ್ಬನ್ ಸೊಸಾಯಿಟಿಯು ಗ್ರಾಹಕರಿಗೆ ವಿಷೇಶ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಎಂದು ಅಧ್ಯಕ್ಷ ಮಲ್ಲಪ್ಪಾ ಗಾಣಿಗೇರ ಹೇಳಿದರು. ಅವರು ಶನಿವಾರ ಜರುಗಿದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ೩೦ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯ ಶೇರುದಾರರ ಠೇವಣಿದಾರರ ಕಾಳಜಿಯ ಪರಿಣಾಮ ಇಷ್ಟು ಎತ್ತರಕ್ಕೆ ಸಂಸ್ಥೆ ಬೆಳೆಯಲು ಸಾಧ್ಯ ಎಂದ ಅವರು ಸಂಸ್ಥೆಯು ಶೇರು …

Read More »

ನಮ್ಮಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ದರ್ಜೆಯ ಹುದ್ದೆಗಳನ್ನು ಅಲಂಕರಿಸಬೇಕು-ಶಾಸಕ ಬಾಲಚಂದ್ರ ಜಾರಕಿಹೊಳಿ

ಜ್ಯೂನಿಯರ್ ಕಾಲೇಜುಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಕೆ. *ಮೂಡಲಗಿ: ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವಿದ್ಯಾರ್ಥಿಗಳು ಉನ್ನತವಾದ ಸ್ಥಾನ ಪಡೆಯಬೇಕೆಂಬುದು ನಮ್ಮ ಇರಾದೆಯಾಗಿದ್ದು, ಈ ದಿಸೆಯಲ್ಲಿ ಉಭಯ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ನೀಡುವ ಸದುದ್ದೇಶದಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದೇನೆ. ಶಿಕ್ಷಕರಿಂದ ಮಾತ್ರ ದೇಶದ ಉನ್ನತಿ ಮತ್ತು ಪ್ರಗತಿ ಸಾಧ್ಯವೆಂದು ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಸೋಮವಾರದಂದು ತಾಲೂಕಿನ ಅರಭಾವಿ ಹತ್ತಿರದಲ್ಲಿರುವ ಬಸವೇಶ್ವರ …

Read More »

ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚಾರಣೆ

  ಮೂಡಲಗಿ: ಜಿ.ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡಲಗಿ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಸೆ. ೫ ರಂದು ಸೋಮವಾರ ಮುಂಜಾನೆ ೧೧ ಗಂಟೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ-೨೦೨೨ ನಿಮಿತ್ಯ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಸಾಧಕ ಶಿಕ್ಷಕರಿಗೆ ಅಭಿನಂದನಾ ಸಮಾರಂಭವು ಅರಭಾವಿಯ ಶ್ರೀ ಬಸವೇಶ್ವರ ಸಭಾ ಭವನ ಫ್ಯಾಕ್ಟರಿ ಕ್ರಾಸ್‌ದಲ್ಲಿ ಜರುಗಲಿದೆ ಎಂದು …

Read More »