Breaking News
Home / ಕವನ / ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ

ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ

Spread the love

ಆಶ್ರಯ ನೀಡಿದ ಆಲದ ಆಯಸ್ಸು ತೀರಿದೆ
ಖಗವು ಹೊಸ ಚಿಗುರನರಸಿ ದೂರಕೆ ಹಾರಿದೆ

ಮನೆಯ ಸೂರು ಕಾಲನ ಹೊಡೆತಕೆ ಸಡಿಲಾಗಿದೆ
ಜೀವ ಹೊಸ ಸೂರಿನ ಆಸರೆ ಹುಡುಕಿ ಸಾಗಿದೆ

ಪ್ರಾಣ ಜಲವಾಗಿದ್ದ ಬಾವಿಯ ಸೆಲೆ ಬತ್ತಿದೆ
ದಾಹ ತಣಿಸಲು ನದಿಯನರಸಿ ವಲಸೆ ಹೋಗಿದೆ

ಎದೆಯ ಕ್ಷೀರ ಉಣಿಸಿದವಳು ಹಣ್ಣೆಲೆಯಾದಳು
ಚಿಗುರೆಲೆ ಬಣ್ಣದ ಕನಸನರಸಿ ಪಯಣ ಬೆಳೆಸಿದೆ

‘ಆರಾಧ್ಯೆ’ “ಕಾಣದ ಕಡಲಿಗೆ ಮನ ಹಂಬಲಿಸಿದೆ”
ಜಾಗತೀಕರಣದ ಹೆಸರಲಿ ತಾಯಿಬೇರು  ನಲುಗಿದೆ

ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ


Spread the love

About Ad9 Haberleri

Check Also

*””ಆಗುವುದಾದರೆ ನೀ “”*

Spread the love  *””ಆಗುವುದಾದರೆ ನೀ “”* ನೀ ಏನಾದರೂ ಆಗುವುದಾದರೆ ಕೊನೆ ಇರದ ಕಡಲಿನಂತಾಗು ಶತ್ರುಗಳು ನಿನ್ನ ಸಾಮರ್ಥ್ಯವ …