Breaking News
Home / ಕವನ / ಬೆಟ್ಟದಂತೆ ಪ್ರೀತಿ ಅಚಲವೆಂದವನು ಅದ ಮರೆಯುವ ಮುನ್ನ ಯೋಚಿಸಬೇಕಾಗಿತ್ತು ನೀ

ಬೆಟ್ಟದಂತೆ ಪ್ರೀತಿ ಅಚಲವೆಂದವನು ಅದ ಮರೆಯುವ ಮುನ್ನ ಯೋಚಿಸಬೇಕಾಗಿತ್ತು ನೀ

Spread the love

 

ಬೆಟ್ಟದಂತೆ ಪ್ರೀತಿ ಅಚಲವೆಂದವನು ಅದ ಮರೆಯುವ ಮುನ್ನ ಯೋಚಿಸಬೇಕಾಗಿತ್ತು ನೀ

ಕೊಟ್ಟ ಮಾತನ್ನು ಕಡೆಗಣಿಸಿ ದೂರ ಸರಿಯುವ ಮುನ್ನ ಯೋಚಿಸಬೇಕಾಗಿತ್ತು ನೀ//

ದಟ್ಟಕಾನನದಿ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿದೆ ಮಾನಿನಿಯ ಬದುಕು
ಪಟ್ಟುಬಿಡದೆ ಪಡೆದ ಇಷ್ಟದ ಪ್ರೇಮವನು ಕೈಬಿಡುವ ಮುನ್ನ ಯೋಚಿಸಬೇಕಾಗಿತ್ತು ನೀ//

ಕೆಟ್ಟಘಳಿಗೆಯೊಂದು ಕರಗಿ ಶುಭಕಾಲದ ಆಗಮನವಾಗುವ ಮುನ್ಸೂಚನೆಯಿತ್ತೇ,,?
ನಟ್ಟನಡುವೆಯಲಿ ಕೈಬಿಟ್ಟು ಹೋಗುವ ಮುನ್ನ ಯೋಚಿಸಬೇಕಾಗಿತ್ತು ನೀ//

ಅಷ್ಟೈಶ್ವರ್ಯವ ದೂರತಳ್ಳಿ ಬಂದವಳು ನಿನ್ನ ಅದಮ್ಯ ಒಲವಿಗಾಗಿ ಕಾತರಿಸಿ
ಇಷ್ಟಪಟ್ಟು ಬಂದವಳ ಮನ ನೋಯಿಸುವ ಮುನ್ನ ಯೋಚಿಸಬೇಕಾಗಿತ್ತು ನೀ//

ಜಲ ಳ ಮನವು ಘಾಸಿಗೊಂಡು ತೊಳಲಾಟದ ನೋವಲ್ಲಿ ವ್ಯಥೆಪಡುತಿದೆ
ನಲಿವನ್ನು ಹರಿವತೊರೆಯೊಳಗೆ ಬಿಡುವ ಮುನ್ನ ಯೋಚಿಸಬೇಕಾಗಿತ್ತು ನೀ//

                  ಆನಂದಜಲ,ಶಿಕ್ಷಕಿ

                     ತುರುವೇಕೆರೆ


Spread the love

About Ad9 Haberleri

Check Also

*””ಆಗುವುದಾದರೆ ನೀ “”*

Spread the love  *””ಆಗುವುದಾದರೆ ನೀ “”* ನೀ ಏನಾದರೂ ಆಗುವುದಾದರೆ ಕೊನೆ ಇರದ ಕಡಲಿನಂತಾಗು ಶತ್ರುಗಳು ನಿನ್ನ ಸಾಮರ್ಥ್ಯವ …