Breaking News

ಬೆಳಗಾವಿ

ವಸತಿ ಯೋಜನೆ ಅವಧಿ ವಿಸ್ತರಣೆಯಾಗಲಿ: ರಮೇಶ ಕತ್ತಿ

ವಸತಿ ಯೋಜನೆ ಅವಧಿ ವಿಸ್ತರಣೆಯಾಗಲಿ: ರಮೇಶ ಕತ್ತಿ ಸಂಕೇಶ್ವರ : ರಾಜ್ಯ ಸರ್ಕಾರ ವಿವಿಧ ಯೋಜನೆಯಡಿ ಮಂಜೂರಾತಿ ನೀಡಿರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಮನೆಗಳ ಕಾರ್ಯಾರಂಭ ಮಾಡಲು ಮಾರ್ಚ್ 10 ಹಾಗೂ 15ರ ಗಡುವು ವಿಧಿಸಿದ್ದು, ಈ ಅವಧಿಯನ್ನು ಕೂಡಲೇ ಏ.30ರವರೆಗೆ ವಿಸ್ತರಣೆ ‌ಮಾಡಬೇಕು ಎಂದು‌ ಮಾಜಿ ಸಂಸದ ರಮೇಶ ಕತ್ತಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು,‌ ಗಡಿಜಿಲ್ಲೆ ಈಗಾಗಲೇ ‌ನೆರೆಯಿಂದ ನಲುಗಿ …

Read More »

ಕರುನಾಡು ಸೈನಿಕ ತರಬೇತಿ ಕೇಂದ್ರದ ನೂತನ ದೈಹಿಕ ತರಬೇತಿ ಮೈದಾನದಲ್ಲಿ ಹೋಳಿ ಹಬ್ಬ

ಮೂಡಲಗಿ: -ಪಟ್ಟಣದಲ್ಲಿ ಮಂಗಳವಾರದಂದು ಕರುನಾಡು ಸೈನಿಕ ತರಬೇತಿ ಕೇಂದ್ರದ ನೂತನ ದೈಹಿಕ ತರಬೇತಿ ಮೈದಾನದಲ್ಲಿ ಹೋಳಿ ಹಬ್ಬವನ್ನು ಗಣ್ಯರೊಂದಿಗೆ ಪರಸ್ಪರರು ಬಣ್ಣ ಎರಚಿ ಸಿಹಿ ಹಂಚಿ ಸಡಗರ ಸಂಭ್ರಮದಿಂದ ಆಚರಿಸಿದರು. ಸಂಭ್ರಮಾಚರಣೆಯಲ್ಲಿ ಪಿ.ಎಸ್.ಐ.ಮಲ್ಲಿಕಾರ್ಜುನ ಸಿಂಧೂರ ಆಗಮಿಸಿ ಶಿಭಿರಾರ್ಥಿಗಳನ್ನುದ್ದೇಶಿಸಿ ಹಾನಿಕಾರಕ ರಾಸಾಯನಿಕಯುಕ್ತ ಬಣ್ಣ ಉಪಯೋಗಿಸದೆ ಒಣ ಬಣ್ಣ ಮಾತ್ರ ಹಚ್ಚಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಹೇಳಿ ಹಬ್ಬದ ಶುಭಾಶಯ ಹೇಳಿದರು. ಪ್ರೋ ಸಂಜಯ ಖೋತ ಮಾತನಾಡಿ,ಹಬ್ಬ,ಹರಿದಿನಗಳು ನಾಡಿನ ಸಂಕೃತಿಗಳನ್ನು ಬಿಂಬಿಸುತ್ತವೆ ನಿತ್ಯದ …

Read More »

ಮೂಡಲಗಿಯ ಶ್ರೀ ಶ್ರೀಪಾಧಬೋಧ ಸರಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮೂಡಲಗಿ- ಮೂಡಲಗಿಯ ಶ್ರೀ ಶ್ರೀಪಾಧಬೋಧ ಸರಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾತನಾಡಿದರು ಪ್ರಾಸ್ತಾವಿಕವಾಗಿ ಮಾತನಾಡಿದ, ಮಹಿಳಾ ಘಟಕದ ಸಂಯೋಜಕರಾದ.  ಶೀತಲ ತಳವಾರ ಅವರು, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು ಶಿವಬೋಧರಂಗ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ಡಾ.ರೇಖಾ ಬಿರಾದಾರ ಅವರು, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಸಾಧನೆ ತೋರುತ್ತಿದ್ದಾಳೆ. ಈ ಮಹಿಳಾ ದಿನಾಚರಣೆ …

Read More »

ಸತತ ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಬಾಗೋಜಿ

ಮೂಡಲಗಿ: ಶಿಕ್ಷಕ ಸಮುದಾಯದ ಸಹಕಾರ ಹಾಗೂ ಸಹಕಾರದಿಂದಾಗಿ ಆರ್ಥಿಕವಾಗಿ ನಾವು ಬೆಳೆಯುವದರ ಜೊತೆಗೆ ಸಂಘದ ಬೆಳೆವಣಿಗೆಯಲ್ಲಿ ಎಲ್ಲರೂ ಪರಸ್ಪರ ಕೈ ಜೋಡಿಸಿದರ ಫಲವಾಗಿ ಸತತ ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಬಾಗೋಜಿ ಹೇಳಿದರು. ಅವರು ಇಂದು ಜರುಗಿದ 2020-2025 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮಾತನಾಡಿದರು. ಮೂಡಲಗಿ ವಲಯದ …

Read More »

ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ ಸುಧಾರಣೆಗೆ 3.95 ಕೋಟಿರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ_ಸುಧಾರಣೆಗೆ 3.95 ಕೋಟಿ_ರೂ. ಬಿಡುಗಡೆ : ಶಾಸಕ_ಬಾಲಚಂದ್ರ ಜಾರಕಿಹೊಳಿ ಗೋಕಾಕ : ಸತತವಾಗಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಆರ್‍ಡಿಪಿಆರ್ ಇಲಾಖೆಯಿಂದ 3.95 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಸಂಜೆ ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಅವರು, ಅಡಿಬಟ್ಟಿ …

Read More »

ಆಧಾರ ಕಾರ್ಡಗಾಗಿ ಅಂಗವಿಕಲ ಮಗನನ್ನು ಹೋತ್ತು ತಿರಗುತ್ತಿರುವ ಅಸಹಾಯಕ ತಂದೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ನಗರದಲ್ಲಿ ಆಧಾರ ಕಾರ್ಡ್ ಮಾಡಿಸಲು ಅಲೆದಾಡುತ್ತೀರುವ ಅಂಗವಿಕಲ ಯುವಕ ಮೂಡಲಗಿ ನಗರಕ್ಕೆ ಮೂರು ಬಾರಿ ಬಂದರು ಆಗದ ಕಾರ್ಡ .ಅಂಗವಿಕಲ ಮಗನನ್ನು ಹೋತ್ತು ತಿರಗುತ್ತಿರುವ ಅಸಹಾಯಕ ತಂದೆ.ಮೂಡಲಗಿಯಲ್ಲಿ ಮೂರು ಆಧಾರ ಸೇವಾ ಕೇಂದ್ರ ಇದ್ದು ಅವುಗಳು ಏಜೆಂಟರಿಗೆ ಮಾತ್ರ ಇದ್ದಾವೆ. ಇಲ್ಲಿ ಏಜೆಂಟರ ಕೆಲಸಗಳು ಮಾತ್ರ ಆಗುತ್ತವೆ.ಇವುಗಳನ್ನ ಗುತ್ತಿಗೆ ಪಡೆದ ಮೂಡಲಗಿಯ ಕಲವೊಂದು ಆನ್ಲೈನ್ ಸೆಂಟರ್ ಗಳು.ಎಲ್ಲದಕ್ಕು ಆಧಾರ ಕೇಳುವ ಸರ್ಕಾರ ಸೌಲಭ್ಯ ವಿತರಿಸುವಲ್ಲಿ …

Read More »

ನಮ್ಮ ನಡೆ ಜನರ ಸುರಕ್ಷತೆ ಕಡೆಗೆ ಡಿ.ವೈ.ಎಸ್.ಪಿ. ಪ್ರಭು ಡಿ.ಟಿ

ಮೂಡಲಗಿ: ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಪೋಲೀಸ ಇಲಾಖೆ ವಿನೂತನ ಕಾರ್ಯಕ್ರಮ ಗೋಕಾಕದಿಂದ ಘಟಪ್ರಭಾವರೆಗೆ ಕಾಲ್ನಡಿಗೆ ಜಾಥಾ ಕಾಯ೯ಕ್ರಮಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಿದರು. ದೇಶದಲ್ಲಿ ರಸ್ತೆ ಅಪಘಾತದಲ್ಲಿ ಎಲ್ಲಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದು …

Read More »

ಬಿಎಸ್‍ವೈರಿಂದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ

ಗೋಕಾಕ : ಜಗಕ್ಕೆ ಅನ್ನ ನೀಡುವ ಅನ್ನದಾತನ ಹೆಸರಿನಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನೇಗಿಲಯೋಗಿ ಬಿ.ಎಸ್. ಯಡಿಯೂರಪ್ಪನವರು ಇಂದು ಏಳನೇ ಬಾರಿಗೆ ಮಂಡಿಸಿರುವ ಮುಂಗಡ ಪತ್ರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ದೊರೆತಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿರುವ 2020-21ನೇ ಸಾಲಿನ ಮುಂಗಡ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, …

Read More »

ತಿಗಡಿ ಗ್ರಾಮದ ಹೆಮ್ಯೆಯ ಪುತ್ರ ಶ್ರೀ ಶಿವಬಸಪ್ಪಾ ರು ಪಾಟೀಲ 

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದ ವೀರ ಯೋಧ ಶ್ರೀ ಶಿವಬಸಪ್ಪಾ ರು ಪಾಟೀಲ . ತಿಗಡಿ ಗ್ರಾಮದಲ್ಲಿ ದಿನಾಂಕ 18/07/1984 ರಲ್ಲಿ ಜನಸಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು 1990ರಲ್ಲಿ ಪ್ರಾರಂಭಮಾಡಿ 1 ರಿಂದ 4ನೇ ತರಗತಿಯ ವರೆಗೆ GHS ತಿಗಡಿ ಶಾಲೆನಲ್ಲಿ ಮುಗಸಿ, 5 ರಿಂದ 7ನೇ ತರಗತಿ ಯನ್ನು ಸರಕಾರಿ ಗಂಡು ಮಕ್ಕಳ …

Read More »

ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮ

ಮೂಡಲಗಿ : ಶತಮಾನಗಳಿಂದಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಸಹಾಯ ನೀಡಿ ಭವ್ಯ ಭವಿಷ್ಯತ್ತಿ ಪ್ರಜೆಗಳ ನಿರ್ಮಾಣ ಕಾರ್ಯ ಮಾಡಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೂಡಲಗಿ ತಾಲೂಕಿನಲ್ಲಿ ಶತಮಾನ ಕಂಡ ಶಾಲೆಗಳಲ್ಲಿ ಇದೊಂದಾಗಿದೆ. ಇಂತಹ ಶಾಲೆಯಲ್ಲಿ ಅನೇಕ …

Read More »