Breaking News

ಮೂಡಲಗಿ

ನ್ಯಾಯವಾಧಿ ಲಕ್ಷ್ಮಣ ಅಡಿಹುಡಿಯವರಿಗೆ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ

ಮೂಡಲಗಿ: ಸ್ವಾಮಿ ವಿವೇಕಾನಂದರ ನಡೆ-ನುಡಿಗಳು ಇಂದಿನ ಯುವಕರಿಗೆ ದಾರಿ ದೀಪವಾಗಿವೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ನ್ಯಾಯವಾಧಿ ಲಕ್ಷ್ಮಣ ಅಡಿಹುಡಿ ಯುವಕರಿಗೆ ಕಿವಿಮಾತು ಹೇಳಿದರು. ಇತ್ತಿಚ್ಚೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರ, ವಿಜಯಪುರ ಜಿಲ್ಲಾ ಹಾಗೂ ತಾಲೂಕಾ ಘಟಕ ಮುದ್ದೇಬಿಹಾಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯುಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ …

Read More »

ಧರ್ಮಟ್ಟಿ ಲಕ್ಷ್ಮೀದೇವಿ ದೇವಸ್ಥಾನವು ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ: ಕೆಎಂಎಫ್ ಅಧ್ಯಕ್ಷ, ಬಾಲಚಂದ್ರ ಜಾರಕಿಹೊಳಿ

  ಧರ್ಮಟ್ಟಿ (ತಾ:ಮೂಡಲಗಿ) : ಈ ಭಾಗದಲ್ಲಿ ಧರ್ಮಟ್ಟಿ ಲಕ್ಷ್ಮೀದೇವಿ ದೇವಸ್ಥಾನವು ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ ಎಂದು ಕೆಎಂಎಫ್ ಅಧ್ಯಕ್ಷ, ಮಾಜಿ ಸಚಿವ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಐತಿಹಾಸಿಕ ಲಕ್ಷ್ಮೀದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದಾಗಿನಿಂದ ಈ ದೇವಿಯ ದರ್ಶನ ಪಡೆಯುತ್ತ ನಾನು ಕೃತಾರ್ಥನಾಗಿದ್ದೇನೆ ಎಂದು ಅವರು ತಿಳಿಸಿದರು. …

Read More »

ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ

  ಮೂಡಲಗಿ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ೨೦೨೩ ರ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅಧ್ಯಕ್ಷತೆಯಲ್ಲಿ ಜರುಗಿತು. ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿ, ಮುಂಬರುವ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ೨೮೧ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಅರಭಾವಿ ಮತ ಕ್ಷೇತ್ರದ ಸೇಕ್ಟರ ಅಧಿಕಾರಿಗಳು ಮತಗಟ್ಟೆಗಳಿಗೆ …

Read More »

ಭಗವಂತನು ಎಲ್ಲಿಯವರೆಗೆ ಜನರ ಸೇವೆ ಮಾಡಲು ಅವಕಾಶ ಕೊಡುತ್ತಾನೋ ಅಲ್ಲಿಯವರೆಗೆ ಜನಸೇವೆಗೆ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ :ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಭಗವಂತನು ಎಲ್ಲಿಯವರೆಗೆ ಜನರ ಸೇವೆ ಮಾಡಲು ಅವಕಾಶ ಕೊಡುತ್ತಾನೋ ಅಲ್ಲಿಯವರೆಗೆ ಜನಸೇವೆಗೆ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ. ಜನರ ಸೇವೆಯನ್ನು ಮಾಡುತ್ತಿರುವದರಿಂದ ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದನೆ ಮಾಡುತ್ತಿರುವುದು ನನಗೆ ತೃಪ್ತಿದಾಯಕವಾಗಿದೆ ಎಂದು ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇತ್ತಿಚೆಗೆ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಹಣಮಂತ ದೇವರ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ದಿಗಾಗಿ ಸದಾ ಬದ್ಧನಿರುವೆ. ಜೊತೆಗೆ ಜನರು ನೀಡುತ್ತಿರುವ ಪ್ರೀತಿ, ವಿಶ್ವಾಸ, …

Read More »

ಹೋಲ್ ಸೇಲ್ ಫರ್ಟಿಲೈಜರ್ಸ್ ಡೀಲರಗಳು ಕೆಲವು ರಸಗೊಬ್ಬರಗಳ ಜೊತೆಗೆ ಲಿಂಕ್‍ ರೈತರಿಗೆ ಮತ್ತಷ್ಟೋ ದರ ದುಭಾರಿ : ಲಖನ್ ಸವಸುದ್ದಿ

ಮೂಡಲಗಿ : ರಾಯಬಾಗ ತಾಲೂಕಿನ ಮಲ್ಟಿ ಸ್ಟೇಟ್ ಕೃಷ್ಣಾ ಗೋದಾವರಿ ಸೊಸಾಯಿಟಿ ಹಾಗೂ ಘಟಪ್ರಭಾ ಫರ್ಟಿಲೈಜರ್ಸ್ ಪ್ರೈ ಲಿಮಿಟೆಡ್ ಮತ್ತು ಹೋಲ್ ಸೇಲ್ ಫರ್ಟಿಲೈಜರ್ಸ್ ಡೀಲರಗಳಾದ ರಾಯಬಾಗ ತಾಲೂಕಿನ ನಂದಿಕುರಳಿ, ಹುಬ್ಬರವಾಡಿದಲ್ಲಿ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡು ರೈತರ ಬಿತ್ತನೆ ವೇಳೆಯಲ್ಲಿ ರಸಗೊಬ್ಬರಗಳ ಅಭಾವ ಸೃಷ್ಠಿ ಮಾಡಿ ರೈತರಲ್ಲಿ ಗೊಂದಲ್ಲ ಸೃಷ್ಠಿಸಿ ಹೆಚ್ಚಿನ ದರದಲ್ಲಿ ಮಾರಾಟವ ದಂಧೆಯಲ್ಲಿ ಡೀಲರಗಳು ತೊಡಗಿಕೊಂಡಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಲಖನ್ ಸವಸುದ್ದಿ ಆರೋಪಿಸಿದರು. ಶುಕ್ರವಾರದಂದು ಪಟ್ಟಣದ …

Read More »

ನರೇಗಾ ಯೋಜನೆಯಡಿ ಮಂಜೂರಾಗಿರುವ 16 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ : ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು

ಮೂಡಲಗಿ: ನರೇಗಾ ಯೋಜನೆಯಡಿ ಮಂಜೂರಾಗಿರುವ 16 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಗೃಹದಲ್ಲಿ ಬುಧವಾರದಂದು ಜರುಗಿದ ಅರಭಾವಿ ಕ್ಷೇತ್ರದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರುವರಿ ತಿಂಗಳ ಅಂತ್ಯದೊಳಗೆ ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು. …

Read More »

ರಮೇಶ ಜಾರಕಿಹೊಳಿ ಯಾವತ್ತು ಕೂಡಾ ಪಂಚಮಸಾಲಿಗಳ 2ಎ ಹೋರಾಟಕ್ಕೆ ಬೆಂಬಲಿಸಿ ವಿಧಾನಸೌಧದಲ್ಲಿ ಸರ್ಕಾರವನ್ನು ಒತ್ತಾಯಿಸಿಲ್ಲ

ಮೂಡಲಗಿ: ಇತ್ತೀಚ್ಚೆಗೆ ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪಂಚಮಸಾಲಿಗಳ ಬಗ್ಗೆ ಕೇಳಿದ ಪ್ರಶ್ನೇಗೆ ರಮೇಶ ಜಾರಕಿಹೊಳಿ ಅವರು ಉತ್ತರಿಸುವ ಸಂದರ್ಭದಲ್ಲಿ ಪಂಚಮಸಾಲಿಗಳ ಹೋರಾಟದಲ್ಲಿ ಕೆಲವು ನಾಯಿಗಳಿವೆ ಎಂದು ನಾಲಿಗೆ ಹರಿ ಬಿಟ್ಟಿರೋದನ್ನು ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಕಠೋರವಾಗಿ ಖಂಡಿಸುತ್ತದೆ ಎಂದು ಪಂಚಮಸಾಲಿ ಸಂಘಟನೆಯ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ ಹೇಳಿದರು. ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿಯವರು ಕೆಲವು ನಾಯಿಗಳೆಂದು ಯಾರಿಗೆ …

Read More »

ಕಲ್ಲೋಳಿಯಲ್ಲಿ 5.50 ಕೋಟಿ ರೂಗಳ ವೆಚ್ಚದ ನಗರೋತ್ಥಾನ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ನಗರೋತ್ಥಾನ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಕಲ್ಲೋಳ್ಳಿ ಪಟ್ಟಣದಲ್ಲಿ 5.50ಕೋಟಿ ರೂಗಳ ವೆಚ್ಚದ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ಬರುವ ರಸ್ತೆ ನಿರ್ಮಾಣ ಮತ್ತು ಒಳಚರಂಡಿ ಕಾಮಗಾರಿಗಳು ಆದಷ್ಟು ಬೇಗನೇ ಪೂರ್ಣ ಮಾಡುವಂತೆ ಸೂಚಿಸಿದರು. ಕಲ್ಲೋಳಿ ಪಟ್ಟಣದ ನಾಗರೀಕರಿಗೆ …

Read More »

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ) ಮೂಡಲಗಿ ಘಟಕದಿಂದ ತಹಶೀಲ್ದಾರ್ ಅವರಿಗೆ ಮನವಿ

ಮೂಡಲಗಿ  : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಿದರ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ರವರು ಸುಳ್ಳು ಹೇಳಿಕೆ ನೀಡಿ ನಮ್ಮ ಸಂಘದ ಹೆಸರಿಗೆ ಕಪ್ಪು ಮಸಿ ಬಳೆಯಲು ಪ್ರಯತ್ನಿಸಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಮೂಡಲಗಿ ತಾಲೂಕಾ ಘಟಕದ ಅದ್ಯಕ್ಷ ಭಗವಂತ ಉಪ್ಪಾರ ಆಗ್ರಹಿಸಿದರು. ಮಂಗಳವಾರದಂದು ಪಟ್ಟಣದ ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ …

Read More »

ಜ.25ರಂದು ಮೂಡಲಗಿಯಲ್ಲಿ ವೇಮನರ ಜಯಂತೋತ್ಸವ

ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ  ದಾರ್ಶನಿಕ ಕವಿ ಮಹಾಯೋಗಿ ಶ್ರೀ ವೇಮನರ 611ನೇಯ ಮೂಡಲಗಿ ತಾಲೂಕಾ ಮಟ್ಟದ ಜಯಂತೋತ್ಸವವನ್ನು ಜ.25 ರಂದು ಬಸವ ರಂಗ ಮಂಟಪದಲ್ಲಿ ಮೂಡಲಗಿ ರಡ್ಡಿ ಬಂದುಗಳಿಂದ  ಹಮ್ಮಿಕೊಳ್ಳಲಾಗಿದೆ ಎಂದು ಮೂಡಲಗಿ  ವಿಜಯಕುಮಾರ ಸೋನವಾಲ್ಕರ ಮತ್ತು ಪ್ರದೀಪ ಲಂಕೆಪ್ಪನವರ ತಿಳಿಸಿದರು.     ಸೋಮವಾರದಂದು ಪಟ್ಟಣದಲ್ಲಿನ ಪತ್ರಿಕಾ ಕಾರ್ಯಲಯದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು ಜ.25 ರಂದು ಮುಂಜಾನೆ 10ಕ್ಕೆ ಮೂಡಲಗಿ ಶಿಕ್ಷಣ ಸಂಸ್ಥೆಯ  ಹತ್ತಿರದಿಂದ ಬೃಹತ …

Read More »